28ಕ್ಕೆ 28 ಗೆಲ್ಲುವ ಗುರಿ ಇದ್ದು 28ಕ್ಕೆ 25 ಗೆದ್ದೇ ಗೆಲ್ತೀವಿ: ಬಿಎಸ್‍ವೈ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಗೆಲ್ಲುವ ಗುರಿ ಇದೆ. ಆದರೆ 28ಕ್ಕೆ 25 ಗೆದ್ದೇ ಗೆಲ್ತೀವಿ ಎಮದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಡಾಲರ್ಸ್ ಕಾಲೋನಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಇವತ್ತು ಪಟ್ಟಿ ಕರ್ನಾಟಕದ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ. ವಿಜಯೇಂದ್ರ ದೆಹಲಿಯಲ್ಲೇ ಇದ್ದಾರೆ. ಇವತ್ತು ಚರ್ಚೆ ಮಾಡಿ, ಪಟ್ಟಿ ಅಂತಿಮ ಆಗಲಿದೆ. 28ಕ್ಕೆ 28ಗೆಲ್ಲುವ ಗುರಿ ಇದೆ, 28ಕ್ಕೆ 25 ಗೆದ್ದೇ ಗೆಲ್ತೀವಿ ಎಂದರು.

ಇದೇ ವೇಳೆ ಮೈಸೂರು ಲೋಕಸಭಾ (Mysuru Loksabha  Constituency) ವಿಚಾರದಲ್ಲಿ ಯದುವೀರ್ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿಯೆಲ್ಲ ಇದ್ದರೆ ನಾನು ಇಲ್ಲಿ ಚರ್ಚೆ ಮಾಡಲ್ಲ ಎಂದರು. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?

ಮೋದಿ ಅವರ ರಾಜ್ಯ ಪ್ರವಾಸವೂ ಫಿಕ್ಸ್ ಆಗಿದೆ. ಶಿವಮೊಗ್ಗಕ್ಕೂ ಬರುತ್ತಾರೆ, ಎಲ್ಲ ಕಡೆ ಹೆಚ್ಚು ಜನ ಸೇರಿಸಬೇಕು, ಸೇರಿಸ್ತೀವಿ ಎಂದ ಅವರು, ಹಾಲಿ ಎಂಪಿಗಳಿಗೆ ಟಿಕೆಟ್ ಕೈ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನಾನು ಮಾತಾಡಲ್ಲ, ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.