ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕರ ಈ ನಡೆ ಕೆಪಿಸಿಸಿ ನಾಯಕರಿಗೆ ದಿಕ್ಕೇ ತೋಚದಂತೆ ಮಾಡಿದ್ದು, ಎಐಸಿಸಿ ಮೊರೆ ಹೋಗಿದ್ದಾರೆ. ಅತೃಪ್ತ ಶಾಸಕರಿಗೆ ಎಐಸಿಸಿ ಖಡಕ್ ವಾರ್ನಿಂಗ್ ಕೊಟ್ಟಿದೆ.
ಸತ್ಯ ಯಾವುದು ಸುಳ್ಳು ಯಾವುದು..? ಯಾರನ್ನ ನಂಬೋದು ಯಾರನ್ನ ಬಿಡೋದು ಎಂಬುದೆ ತಿಳಿಯುತ್ತಿಲ್ಲ. ಹೀಗಾಗಿ ಅಖಾಡಕ್ಕೆ ಎಂಟ್ರಿ ಕೊಟ್ಟಿರೋ ಎಐಸಿಸಿ, ಬಹಿರಂಗ ಹೇಳಿಕೆ ಕೊಡುವ ಪಕ್ಷದ ನಾಯಕರ ಮಾತು ಮೀರುವ ಶಾಸಕರಿಗೆ ಎಚ್ಚರಿಕೆ ರವಾನಿಸಲು ಎಐಸಿಸಿ ನಾಯಕರನ್ನೇ ಮುಂದೆ ಬಿಟ್ಟಿದೆ. ಜೊತೆಗೆ ದಿನಕ್ಕೊಂದು ಹೇಳಿಕೆ ಕೊಟ್ಟು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: ನಾನೊಬ್ಬ ಡಾಕ್ಟರ್, ಆಪರೇಷನ್ಗೆ ಒಳಗಾಗುವುದಿಲ್ಲ: ಶಾಸಕ ಸುಧಾಕರ್

ಅದರಂತೆ ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿಗೌಡ ಶಾಸಕ ಸುಧಾಕರ್ಗೆ ಶನಿವಾರ ಕ್ಲಾಸ್ ತಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡ ಬೆಂಗಳೂರಿನಲ್ಲಿದ್ದು, ಎಲ್ಲಾ ಶಾಸಕರಿಗೆ ಶಿಸ್ತಿನ ಪಾಠ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಅದನ್ನು ಮೀರಿ ಯಾರಾದರೂ ವರ್ತಿಸಿದ್ರೆ ಪಕ್ಷದಿಂದ ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಿದ್ದಾರೆ.

ಆದ್ರೆ ನಿನ್ನೆ ರಾತ್ರಿ ಟ್ವೀಟ್ ಮಾಡಿರುವ ಡಾ.ಸುಧಾಕರ್, ನಾನೇ ಓರ್ವ ವೈದ್ಯ. ನಾನು ಆಪರೇಷನ್ಗೆ ಒಳಗಾಗಲ್ಲ. ಸ್ನೇಹಿತರಾದ ಎಂಟಿಬಿ ನಾಗರಾಜ್ ಮತ್ತಿತ್ತರ ಸ್ನೇಹಿತರೊಂದಿಗೆ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಆಪರೇಷನ್ ಕಮಲದ ಜೊತೆ ಸಂಬಂಧ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply