ಗುಜರಾತ್‌ನಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ – ಮೋದಿ ತವರಲ್ಲಿ ಇದೆಂಥಾ ಘಟನೆ ಅಂತ ಕಾಂಗ್ರೆಸ್‌ ತೀವ್ರ ತರಾಟೆ

– ಇದು ಭೂಗತ ಮಳೆ ನೀರು ಕೊಯ್ಲು ಸೌಲಭ್ಯ ಎಂದು ಟೀಕೆ

ಅಹಮದಾಬಾದ್: ಇಲ್ಲಿ ಸುರಿದ ಭಾರೀ ಮಳೆಗೆ (Gujarat Rains) ರಸ್ತೆ ಕುಸಿದಿದ್ದು, ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಈ ನಡುವೆ ಕಾಂಗ್ರೆಸ್‌ ಆಡಳಿತಾ ರೂಢ ಬಿಜೆಪಿ ಸರ್ಕಾರವನ್ನು (BJP State GovernMent) ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ವೇಳೆ ನಗರದ ಶೆಲಾ ಪ್ರದೇಶದಲ್ಲಿ ರಸ್ತೆ ದೊಡ್ಡದಾಗಿ ಕುಸಿತಗೊಂಡಿದೆ. ರಸ್ತೆ ಮಧ್ಯೆ ದೊಡ್ಡ ಹೊಂಡವೇ ನಿರ್ಮಾಣವಾದಂತೆ ಕಾಣಿಸುತ್ತಿದೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: `ಭಾರತದ ಸಂವಿಧಾನ’ ಇಸ್ಲಾಂ ವಿರೋಧಿ ಅಂತ ಬೋಧನೆ – ಇಬ್ಬರು ಶಂಕಿತ ಉಗ್ರರು ಅರೆಸ್ಟ್

ಗುಜರಾತ್‌ನಾದ್ಯಂತ ಭಾರೀ ಮಳೆಯಾಗಿದೆ. ಸೂರತ್, ಭುಜ್, ವಾಪಿ, ಭರೂಚ್ ಮತ್ತು ಅಹಮದಾಬಾದ್‌ನಲ್ಲಿ ‌ನಿರಂತರ ಸುರಿದ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿವೆ. ಸೂರತ್ ಜಿಲ್ಲೆಯ ಪಲ್ಸಾನಾ ತಾಲೂಕಿನಲ್ಲಿ 153 ಮಿಮೀ ಮಳೆಯಾಗಿದೆ, ಮರಗಳು ಧರೆಗುರುಳಿವೆ, ಕೆಲವೆಡೆ ಅಂಡರ್‌ಪಾಸ್‌ಗಳು ಪ್ರವೇಶಿಸಲಾಗದೇ ವಾಹನ ಸವಾರರು ಪರದಾಡುವಂತಾಗಿತ್ತು. ಮುಂದಿನ ನಾಲ್ಕು ದಿನ ಇದೇ ರೀತಿ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಗು ತಪ್ಪು ಮಾಡಿದಾಗ ತಂದೆಗೆ ಆಗುವಷ್ಟು ನೋವು ನನಗೂ ಆಗ್ತಿದೆ: ಹಂಸಲೇಖ ಭಾವುಕ

ಕಾಲೆಳೆದ ಕಾಂಗ್ರೆಸ್‌:
ಇನ್ನೂ ರಸ್ತೆ ಕುಸಿತ ಕಂಡು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್‌ ಕಾಲೆಳೆದಿದೆ. ಈ ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು. ʻಸ್ಮಾರ್ಟ್‌ ಸಿಟಿ ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಭೂಗತ ಮಳೆ ನೀರು ಕೊಯ್ಲು ಸೌಲಭ್ಯವನ್ನು ಉದ್ಘಾಟಿಸಲಾಗಿದೆ. ಇಲ್ಲಿಂದ ಒಂದು ಹನಿ ನೀರು ಸಹ ಅರಬ್ಬಿ ಸಮುದ್ರಕ್ಕೆ ಸೋರಿಕೆಯಾಗುವುದಿಲ್ಲʼʼ ಎಂದು ಕುಟುಕಿದೆ. ಇದನ್ನೂ ಓದಿ: ಮೈಸೂರು ಮುಡಾದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಸಾವಿರಾರು ಕೋಟಿ ಆಸ್ತಿ ಕಳ್ಳರ ಪಾಲು – ಸಿ.ಟಿ ರವಿ ಆರೋಪ