ಕೃಷಿ ಕಾನೂನು ವಾಪಸ್ ಬೆನ್ನಲ್ಲೇ ಪಂಜಾಬ್‌ನಲ್ಲಿ ಕ್ಯಾಪ್ಟನ್ ಜೊತೆಗೆ ಬಿಜೆಪಿ ಮೈತ್ರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿದ್ದಂತೆ ಪಂಜಾಬ್ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. 2022 ರ ಫೆಬ್ರವರಿ – ಮಾರ್ಚ್‍ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆ ಪೂರ್ವ ಮೈತ್ರಿ ಲೆಕ್ಕಾಚಾರಗಳು ಶುರುವಾಗಿವೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ. ಬಿಜೆಪಿ ಈ ಬಾರಿ ಶಿರೋಮಣಿ ಅಕಾಲಿದಳ ಜೊತೆಗೆ ಮೈತ್ರಿಗೆ ಹಿಂದೇಟು ಹಾಕಿದ್ದು ಕ್ಯಾಪ್ಟನ್ ಜೊತೆಗೆ ಹೊಸ ರಾಜಕೀಯ ತಂತ್ರಗಳನ್ನು ಮಾಡಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವಿನಿ ಶರ್ಮಾ ಕ್ಯಾಪ್ಟನ್ ಜೊತೆಗಿನ ಮೈತ್ರಿಗೆ ನಮ್ಮ ಆದ್ಯತೆಯಾಗಿರಲಿದ್ದು ಶಿರೋಮಣಿ ಅಕಾಲಿದಳ ಜೊತೆಗೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ಲಿಂಗ ತಾರತಮ್ಯವಿಲ್ಲದೇ ಒಂದೇ ರೀತಿ ಸಮವಸ್ತ್ರ ನೀಡಿದ ಕೇರಳ ಶಾಲೆ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಪ್ರತ್ಯೇಕ ಪಕ್ಷ ಸ್ಥಾಪನೆ ಬಗ್ಗೆ ಘೋಷಿಸಿದರು. ಅಲ್ಲದೇ ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದ ಅವರು ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದರು. ಅಮರೇಂದ್ರ ಸಿಂಗ್ ಭೇಟಿ ಬಳಿಕ ಕೇಂದ್ರ ಸರ್ಕಾರವೂ ಕಾನೂನು ವಾಪಸ್ ಪಡೆದಿದ್ದು ತೆರೆ ಹಿಂದಿನ ರಾಜಕೀಯ ಹೊಂದಾಣಿಕೆಯನ್ನ ತೊರ್ಪಡಿಸಿದೆ. ಇದನ್ನೂ ಓದಿ:  ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ

ಕಳೆದ ಬಾರಿಯ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ 84% ಸ್ಥಾನಗಳಲ್ಲಿ ಸ್ವರ್ಧಿಸಿದರೇ ಬಾಕಿ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು. ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವ ವಿಚಾರದಲ್ಲಿ ಬಿಜೆಪಿ ಮತ್ತು ಅಕಾಲಿದಳ ನಡುವಿನ ಆತಂರಿಕ ಸಂಘರ್ಷದ ಬಳಿಕ ಅಕಾಲಿದಳ ಬಿಜೆಪಿ ಜೊತೆಗಿನ ಸಂಬಂಧಕ್ಕೆ ಗುಡ್ ಬೈ ಹೇಳಿತ್ತು. ಈ ವೇಳೆ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗಿತ್ತು. ಈ ಹಿನ್ನಲೆ ಈ ಬಾರಿ ಕ್ಯಾಪ್ಟನ್ ಜೊತೆಗೆ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸುವ ಇರಾದೆಯಲ್ಲಿದೆ ಎಂದು ವಿಶ್ಲೇಷಿಸಲಾಗಿದೆ.

ಕೃಷಿ ಕಾನೂನುಗಳ ವಾಪಸ್ ಪಡೆದಿರುವುದು ಬಿಜೆಪಿಗೆ ಪಂಜಾಬ್‍ನಲ್ಲಿ ಲಾಭವಾಗಲಿದೆ ಎಂದು ಅಧ್ಯಕ್ಷ ಅಶ್ವಿನಿ ಶರ್ಮಾ ಹೇಳಿದ್ದಾರೆ. ಈಗಾಗಲೇ ತಯಾರಿ ಆರಂಭಿಸಿದ್ದು ಕಾರ್ಯಕರ್ತರ ಮೂಲಕ ಮೋದಿ ಸರ್ಕಾರದ ಉದ್ದೇಶಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿ ಅತ್ಯುತ್ತಮ ಕೆಲಸ ಮಾಡಿದ್ದು 117 ಸ್ಥಾನಗಳ ಮೇಲೆ ಗುರಿ ಇದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *