ಹೆಂಡ್ತಿಗಾಗಿ ಒಪ್ಪಂದ ಮಾಡ್ಕೊಂಡ ಇಬ್ಬರು ಗಂಡಂದಿರು!

– ಮೊದ್ಲ ಪತಿ, 4 ಮಕ್ಕಳ ಜೊತೆ ಕಳುಹಿಸಿದ 2ನೇ ಪತಿ
– ಪೊಲೀಸರು ಮುಂದೆ ಒಪ್ಪಂದಕ್ಕೆ ಸಹಿ

ಇಸ್ಲಾಮಾಬಾದ್: ಸಾಮಾನ್ಯವಾಗಿ ಕೆಲವರು ಇಬ್ಬರು ಪತ್ನಿಯರನ್ನು ಹೊಂದಿರುವ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಇಬ್ಬರು ಪತಿಯನ್ನು ಹೊಂದಿದ್ದಾಳೆ. ಇದೀಗ ಆ ಇಬ್ಬರು ಗಂಡಂದಿರು ತಮ್ಮ ಪತ್ನಿಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.

ಇಂತಹದೊಂದು ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ. ರೈವಿಂದ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ರುಬಿನಾಳನ್ನು ಆಕೆಯ ಮಾಜಿ ಪತಿಗೆ ಒಪ್ಪಿಸಿದ್ದಾರೆ. ಇದೀಗ ರುಬಿನಾ ಗರ್ಭಿಣಿಯಾಗಿದ್ದು, 2ನೇ ಪತಿ ತನ್ನ ಪತ್ನಿಯನ್ನು ಆಕೆಯ ಮೊದಲನೇ ಗಂಡನಿಗೆ ಒಪ್ಪಿಸಿದ್ದಾರೆ. ಓರ್ವ ಪತ್ನಿಗಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಒಪ್ಪಂದದ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?
ರುಬಿನಾ ಮತ್ತು ಮೊದಲ ಪತಿಗೆ ನಾಲ್ಕು ಮಕ್ಕಳಿದ್ದವು. ಈಗ ಎರಡನೇ ಪತಿಯ ಮಗುವಿಗೆ ರುಬಿನಾ ಗರ್ಭಿಣಿಯಾಗಿದ್ದಾಳೆ. ಆದರೆ ತನ್ನ ನಾಲ್ಕು ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ, ಕಾಳಜಿ ಮಾಡಿಲ್ಲ ಎಂದು ಚಿಂತೆ ಮಾಡುತ್ತಿದ್ದಳು. ಇದನ್ನು ನೋಡಿದ ಪತಿ ರುಬಿನಾಳನ್ನು ಖುಷಿಯಿಂದ ನೋಡಿಕೊಳ್ಳಬೇಕು ಎಂದುಕೊಂಡಿದ್ದರು. ಹೀಗಾಗಿ ಆಕೆಯನ್ನು ಮೊದಲನೇ ಪತಿಯ ಮನೆಗೆ ಕಳುಹಿಸಿದ್ದಾರೆ.

ಪೊಲೀಸರಿಗೆ ನೀಡಿದ ಒಪ್ಪಿಗೆ ಪತ್ರದಲ್ಲಿ, ರುಬಿನಾ ಗರ್ಭಿಣಿಯಾಗಿದ್ದು ಒಪ್ಪಂದದ ಪ್ರಕಾರ ನಾನು ಯಾವಾಗ ಬೇಕಾದರೂ ಪತ್ನಿ ರುಬಿನಾಳನ್ನು ಭೇಟಿ ಮಾಡಬಹುದು. ಅಲ್ಲದೆ ಒಂದು ವರ್ಷದವರೆಗೂ ಆಕೆ ಮೊದಲನೇ ಪತಿ ಮತ್ತು ಮಕ್ಕಳ ಜೊತೆ ವಾಸಿಸುತ್ತಾಳೆ. ಈ ವೇಳೆ ಮಗುವಾದರೆ ನಾನು ಆ ಮಗುವನ್ನು ತೆಗೆದುಕೊಳ್ಳುತ್ತೇನೆ ಎಂದು ಎರಡನೇ ಪತಿ ತಿಳಿಸಿದ್ದಾರೆ.

ಇನ್ನೂ ಮೊದಲ ಪತಿ, ಪತ್ನಿ ರುಬಿಳಾನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನಿಂದ ಸಾಧ್ಯವಿರುವ ಎಲ್ಲ ಸಂತೋಷವನ್ನು ಆಕೆಗೆ ನೀಡಲು ಪ್ರಯತ್ನಿಸುತ್ತೇನೆ. ಮಕ್ಕಳ ಬಗ್ಗೆ ಆಕೆ ಚೆನ್ನಾಗಿ ಕಾಳಜಿ ವಹಿಸುತ್ತಾಳೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾನೆ.

ಇದೀಗ ಈ ಇಬ್ಬರು ಗಂಡಂದಿರು ಒಪ್ಪಂದ ಮಾಡಿಕೊಂಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

Comments

Leave a Reply

Your email address will not be published. Required fields are marked *