ʼಅಗ್ನಿಪಥʼ ಹಿಂಸಾಚಾರ – ಪ್ರತಿಭಟನಾಕಾರರಿಗೆ ಆಸ್ಪತ್ರೆಯಿಂದಲೇ ಸೋನಿಯಾ ಗಾಂಧಿ ಮನವಿ

ನವದೆಹಲಿ: ಕೇಂದ್ರ ಸರ್ಕಾರದ ʻಅಗ್ನಿಪಥ್‌ʼ ಯೋಜನೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿಭಟನಾಕಾರರ ಪರವಾಗಿ ಆಸ್ಪತ್ರೆಯಿಂದಲೇ ಕರೆ ನೀಡಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದ್ದಾರೆ.

ಹೊಸ ನೇಮಕಾತಿ ಯೋಜನೆಯಾದ ಅಗ್ನಿಪಥ್ ವಿರುದ್ಧದ ಪ್ರತಿಭಟನೆಗಳು ಇದೀಗ ಎಂಟು ರಾಜ್ಯಗಳಿಗೆ ಹರಡಿದೆ. ವಿವಾದಾತ್ಮಕ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ʼಕಾಂಗ್ರೆಸ್‌ ಪಕ್ಷವು ಪ್ರತಿಭಟನಾಕಾರರೊಂದಿಗೆ ನಿಲ್ಲುತ್ತದೆʼ ಎಂದು ಮಿಲಿಟರಿ ಉದ್ಯೋಗಾಕಾಂಕ್ಷಿಗಳಿಗೆ ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧದ ನಡುವೆ ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

ಸೇನಾ ನೇಮಕಾತಿ ಯೋಜನೆಯು ದಿಕ್ಕುಗಳಿಲ್ಲದ ಮತ್ತು ಸೇನಾ ಉದ್ಯೋಗ ಆಕಾಂಕ್ಷಿಗಳ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಘೋಷಿಸಲಾಗಿದೆ ಎಂದು ಕೇಂದ್ರದ ವಿರುದ್ಧ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರವು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ ಹೊಸ ಮಿಲಿಟರಿ ನೇಮಕಾತಿ ಯೋಜನೆಯನ್ನು ಘೋಷಿಸಿದೆ ಎಂದು ನನಗೆ ನಿರಾಶೆಯಾಗಿದೆ. ಅನೇಕ ಮಾಜಿ ಸೈನಿಕರು ಹೊಸ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಹೇಳಿಕೆಯನ್ನೂ ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮೋದಿ ‘ಮಾಫಿವೀರ್’ ಆಗಿ ದೇಶದ ಯುವಕರ ಕ್ಷಮೆ ಕೇಳಬೇಕು: ರಾಹುಲ್ ಗಾಂಧಿ

ಯೋಜನೆಯ ವಿರುದ್ಧ ನಿಮ್ಮ ಹಿತಾಸಕ್ತಿಗಳನ್ನು ರಕ್ಷಿಸುವ ಭರವಸೆಯೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಲವಾಗಿ ನಿಂತಿದೆ. ನಿಜವಾದ ದೇಶಪ್ರೇಮಿಗಳಾಗಿ ನಾವು ಹಿಂಸಾಚಾರ ಬಿಟ್ಟು ತಾಳ್ಮೆ ಮತ್ತು ಶಾಂತಿಯಿಂದ ಯೋಜನೆಯ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ತಿಳಿಸಿದ್ದಾರೆ.

Live Tv

Comments

Leave a Reply

Your email address will not be published. Required fields are marked *