ಬಿಎಸ್‍ವೈ ಡಿನೋಟಿಫಿಕೇಶನ್ ಕೇಸ್‍ಗೆ ಮತ್ತೆ ಟ್ವಿಸ್ಟ್- ಬಸವರಾಜೇಂದ್ರ ಆರೋಪ ಸತ್ಯಕ್ಕೆ ದೂರ ಅಂತು ಎಸಿಬಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಕೇಸ್‍ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ.

ಶಿವರಾಮ ಕಾರಂತ ಲೇಔಟ್ ಪ್ರಕರಣ ಸಂಬಂಧ ಬಿಎಸ್‍ವೈ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಎಸಿಬಿ ಅಧಿಕಾರಿಗಳಿಬ್ಬರು ಒತ್ತಡ ಹೇರುತ್ತಿದ್ದಾರೆ ಎಂದು ಗಣಿ ಇಲಾಖೆ ಉಪ ಕಾರ್ಯದರ್ಶಿ ಬಸವರಾಜೇಂದ್ರ ಆರೋಪಿಸಿ ಶನಿವಾರವಷ್ಟೇ ದೂರು ನೀಡಿದ್ರು.

ಈ ಬೆನ್ನಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸಿರೋ ಎಸಿಬಿ, 2010-11ರಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಬಸವ ರಾಜೇಂದ್ರರ ಆರೋಪಗಳನ್ನು ತಳ್ಳಿ ಹಾಕಿದೆ. ತಮ್ಮ ಮೇಲಿನ ಆರೋಪ ಮುಚ್ಚಿಡುವ ಪ್ರಯತ್ನ ಇದು ಅಂತಾ ಎಸಿಬಿ ಡಿಜಿಪಿ ಎಂಎನ್ ರೆಡ್ಡಿ ತಿಳಿಸಿದ್ದಾರೆ. ಬಸವರಾಜೇಂದ್ರ ಕಾನೂನುಬಾಹಿರವಾಗಿ ಡಿನೋಟಿಫೈ ಕುರಿತಂತೆ ಹಿಂಬರಹ ನೀಡಿದ್ದರು. ಹಾಗಾಗಿ, ಆರೋಪಿ ಬಸವರಾಜೇಂದ್ರನನ್ನ ವಿಚಾರಣೆಗೆ ಕರೆದಿದ್ದು ನಿಜ. ಕೋರ್ಟ್ ಸೂಚನೆ ಪಾಲಿಸಲಾಗಿದೆ.

ಆದ್ರೆ ಎಸಿಬಿ ಅಧಿಕಾರಿಗಳ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದದ್ದು. ಒಂದು ವೇಳೆ ಒತ್ತಡ ಹೇರಿದ್ದೇ ನಿಜವಿದ್ದಲ್ಲಿ ಇಷ್ಟು ದಿನ ಏಕೆ ಸುಮ್ಮನಿದ್ರು. ಎಸಿಬಿ ಮೇಲಾಧಿಕಾರಿಗಳಿಗೆ ದೂರು ನೀಡಬಹುದಿತ್ತಲ್ಲವೇ? ಇದು ತಮ್ಮ ಮೇಲಿನ ಆರೋಪಗಳಿಂದ ಪಾರಾಗಲು ಬಸವರಾಜೇಂದ್ರ ಮಾಡಿರುವ ಹುನ್ನಾರ ಅಷ್ಟೇ ಎಂದು ಎಸಿಬಿ ಡಿಜಿಪಿ ಎಂಎನ್ ರೆಡ್ಡಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *