ಕಲಬುರಗಿ: ಅದು ಬರೋಬ್ಬರಿ 47 ಕೋಟಿ ರೂಪಾಯಿ ವೆಚ್ಚದ ಯೋಜನೆ. ಅಂದುಕೊಂಡಂತೆ ಆದರೆ ಆ ಯೋಜನೆಯಿಂದಾಗಿ ಭೀಮಾ ನದಿಯ ಒಡಲು ಹಸನಾಗಬೇಕಿತ್ತು. ಆದರೆ ಅಂದುಕೊಂಡದ್ದು ಒಂದು, ಆಗಿದ್ದು ಮತ್ತೊಂದು. ಹೀಗಾಗಿ ಪಾಲಿಕೆಯ ಕೋಟಿ ಕೋಟಿ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
ಇದು ಕಲಬುರಗಿ ಜನರ ಜೀವನಾಡಿ ಭೀಮೆ. ಇಡೀ ಮಹಾನಗರದ ಚರಂಡಿ ನೀರು ಈ ಭೀಮೆಯ ಒಡಲು ಸೇರುತ್ತಿದೆ. ಹೀಗಾಗಿ ಚರಂಡಿ ನೀರನ್ನು ಶುದ್ಧೀಕರಿಸಿ ನಂತರ ನದಿಗೆ ಬಿಡಲು ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 47 ಕೋಟಿ ರೂಪಾಯಿಯನ್ನು ಸುರಿದಿದ್ದರು. ಆದರೆ ಈ ಬಹುಕೋಟಿ ವೆಚ್ಚದ ಪ್ಲಾನ್ ವರ್ಕೌಟ್ ಆಗ್ಲಿಲ್ಲ. ಕಾಮಗಾರಿ ಲೋಪದೋಷದಿಂದ ಮತ್ತದೇ ಚರಂಡಿ ನೀರು ನದಿಗೆ ಸೇರ್ತಿದೆ.

ಅಂದಾಜು 40 ಎಂಎಲ್‍ಡಿ ಸಾಮಥ್ರ್ಯದ ಚರಂಡಿ ನೀರು ಶುದ್ದೀಕರಣ ಘಟಕವನ್ನು ಸರ್ಕಾರ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನೆರವಿನಿಂದ ಶುರು ಮಾಡಿತು. ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿದಾಗ ಲೋಪದೋಷ ಕಂಡುಬಂತು. ಹೀಗಾಗಿ ಕರ್ತವ್ಯಲೋಪ ಎಸಗಿದವರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಅತ್ತ ಹಣವೂ ಉಳಿಲಿಲ್ಲ ಇತ್ತ ಕೆಲಸನ್ನು ಸರಿ ಆಗಿಲ್ಲ ಎನ್ನುವ ಹಾಗಾಗಿದೆ ಪಾಲಿಕೆ ಕಾಮಗಾರಿ.






















Leave a Reply