ರೈಲು 20 ಸೆಕೆಂಡ್ ಬೇಗ ಹೊರಟಿದ್ದಕ್ಕೆ ಕ್ಷಮೆಯಾಚಿಸಿದ ಜಪಾನ್ ರೈಲ್ವೇ

ಟೋಕಿಯೋ: ಭಾರತದಲ್ಲಿ ರೈಲುಗಳು ಎಷ್ಟು ಸಮಯ ತಡವಾಗಿ ಬಂದರೂ, ಬೇಗ ಹೋದರೂ ಯಾರು ಆಶ್ಚರ್ಯಪಡುವುದಿಲ್ಲ. ಯಾರೊಬ್ಬರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಜಪಾನ್ ನಲ್ಲಿ ಸಮಯಪಾಲನೆ ಮತ್ತು ನಿಷ್ಠೆಗೆ ಸಾಕಷ್ಟು ಮಹತ್ವ ನೀಡುತ್ತದೆ ಎನ್ನುವ ಮಾತಿಗೆ ಪೂರಕ ಎಂಬಂತೆ ರೈಲೊಂದು ನಿಗದಿ ಪಡಿಸಿದ ಸಮಯಕ್ಕಿಂತ ಕೇವಲ 20 ಸೆಕೆಂಡ್ ಬೇಗ ಹೋಗಿದ್ದಕ್ಕೆ ಪ್ರಯಾಣಿಕರಲ್ಲಿ ಕ್ಷಮೆಯನ್ನು ಯಾಚಿಸಿದೆ.

ಟೋಕಿಯೋ ಮತ್ತು ರಾಜಧಾನಿ ಉತ್ತರ ಉಪನಗರಗಳನ್ನು ಸಂಪರ್ಕಿಸುವ ಟ್ಸುಕುಬಾ ಎಕ್ಸ್ ಪ್ರೆಸ್ ರೈಲು ಮಿನಾಮಿ ನಾಗರೆಯಾಮಾ ನಿಲ್ದಾಣಕ್ಕೆ 9:44:40 ಸೆಕೆಂಡ್‍ಗೆ ಹೋಗಬೇಕಿತ್ತು. ಆದರೆ ಬದಲಿಗೆ 9:44:20 ಸೆಕೆಂಡ್‍ ಬೇಗ  ಹೋಗಿದೆ. ಇದರಿಂದ ಪ್ರಯಾಣಿಕರಿಗೆ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಟ್ಸುಕುಬಾ ಎಕ್ಸ್ ಪ್ರೆಸ್ ಕಂಪೆನಿ ಕ್ಷಮೆಯನ್ನು ಕೇಳಿದೆ.

ರೈಲು ಬೇಗ ಹೋಗಿದ್ದಕ್ಕೆ ಪ್ರಯಾಣಿಕರಿಂದ ಯಾವುದೇ ರೀತಿಯ ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲದೇ ರೈಲು ಬೇಗ ಹೋಗಿದ್ದರಿಂದ ಯಾರೊಬ್ಬ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ. ಯಾರೂ ರೈಲನ್ನು ಮಿಸ್ ಮಾಡಿಕೊಂಡಿಲ್ಲ ಎಂದು ಸಂಸ್ಥೆ ಖಚಿತಪಡಿಸಿದೆ.

ಶಿಂಕನ್ಸೇನ್ ಬುಲೆಟ್ ರೈಲು ಸೇರಿದಂತೆ ಜಪಾನ್ ರೈಲ್ವೆ ಸೇವೆಗಳು ಸಮಯ ಪಾಲನೆಯಿಂದ ವಿಶ್ವದಾದ್ಯಂತ ಮಾದರಿಯಾಗಿದೆ. ಇದರಿಂದಲೇ ಕೆಲವು ಸೆಕೆಂಡ್‍ಗಳು ಬೇಗ ಹೋದರೂ ರೈಲ್ವೇ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯನ್ನು ಕೋರುತ್ತದೆ ಎಂದು ಸಂಸ್ಥೆ ತಿಳಿಸಿತ್ತು.

ಈ ಮಾರ್ಗದಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿರುವುದರಿಂದ ಆ ಮಾರ್ಗದಲ್ಲಿ ಕೆಲವು ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತವೆ. ಒಂದು ವೇಳೆ ತುಂಬಾ ವಿಳಂಬ ಮಾಡಿದರೆ ಜನಸಂದಣಿಯನ್ನು ನಿಯಂತ್ರಿಸಲು ಕಷ್ಟಕರವಾಗುತ್ತದೆ.

ಜಪಾನ್ ರೈಲು ಪ್ರಯಾಣಿಕರ ಸೇವೆಗೆ ಹೆಸರುವಾಸಿಯಾಗಿದೆ. ಆದರೂ ರೈಲ್ವೇ ಸಂಸ್ಥೆ ಬೇಗ ಹೋಗಿದ್ದಕ್ಕೆ ಕ್ಷಮೆಯಾಚಿಸಿದರೂ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ವ್ಯಂಗ್ಯವಾಗಿ ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.

https://twitter.com/Lamdba/status/931303634733846530

https://twitter.com/sambitlnt/status/931400964858245120


Comments

Leave a Reply

Your email address will not be published. Required fields are marked *