ಸರ್ಜರಿ ಬಳಿಕ ಜಾಲಿ ಮೂಡ್‌ನಲ್ಲಿ ಶಿವಣ್ಣ

ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ಅವರು ಸರ್ಜರಿ ಬಳಿಕ ವೆಕೇಷನ್‌ ಮೂಡ್‌ಗೆ ಜಾರಿದ್ದಾರೆ. ಅಮೆರಿಕದ ಕಡಲ ಕಿನಾರೆಯಲ್ಲಿ ಕಾಲ ಕಳೆದಿದ್ದಾರೆ. ಇದನ್ನೂ ಓದಿ:ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ: ಜೈಲಿನಿಂದ ಬಿಡುಗಡೆ ಬಳಿಕ ದರ್ಶನ್‌ ಮೊದಲ ಮಾತು

ಸರ್ಜರಿ ಬಳಿಕ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ಅಮೆರಿಕದ ಸುಂದರ ಜಾಗಗಳಿಗೆ ನಟ ಭೇಟಿ ಕೊಡುತ್ತಿದ್ದಾರೆ. ಅಮೆರಿಕದಲ್ಲಿ ಪತ್ನಿ ಗೀತಾ ಜೊತೆ ಸಮುದ್ರ ವೀಕ್ಷಿಸುತ್ತ ಕಾಲ ಕಳೆದಿದ್ದಾರೆ.

ಮೊನ್ನೆಯಷ್ಟೇ ‘ನನ್ನ ಸಮುದ್ರ ನೀವು’ ಎಂದು ಫ್ಯಾನ್ಸ್ ಕುರಿತು ಶಿವಣ್ಣ ಲವ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇನ್ನೂ ಜ.26ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ.