ಹಿಜಬ್ ಧರಿಸಿದ ಹಿಂದೂ ಹೆಣ್ಮಕ್ಕಳು – ವ್ಯಾಪಕ ವಿರೋಧದ ಬೆನ್ನಲ್ಲೇ ಸಿಎಂ ತನಿಖೆಗೆ ಆದೇಶ

ಭೋಪಾಲ್: ಕರ್ನಾಟದಲ್ಲಿ ಹಿಜಬ್ ಬ್ಯಾನ್ (Hijab Ban) ವಿಚಾರ ಸದ್ಯ ನ್ಯಾಯಾಲಯ ಹಂತದಲ್ಲಿದೆ. ಈ ನಡುವೆ ಮಧ್ಯಪ್ರದೇಶದ (Madhya Pradesh) ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಹಿಜಬ್ ಧರಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಶಾಸಗಿ ಶಾಲೆಯೊಂದು ತನ್ನ ಬೋರ್ಡ್ ಪರೀಕ್ಷೆಯ ಟಾಪರ್ಸ್‌ಗಳ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕೆಲವು ಮುಸ್ಲಿಮರಲ್ಲದ ವಿದ್ಯಾರ್ಥಿನಿಯರೂ ಹಿಜಬ್ ಧರಿಸಿರುವುದು ಕಂಡುಬಂದಿತ್ತು. ಈ ಪೋಸ್ಟರ್‌ಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಶಾಲಾ ಮಂಡಳಿ ಮುಸ್ಲಿಮರಲ್ಲದ ವಿದ್ಯಾರ್ಥಿಗಳಿಗೆ (Non Muslims Students) ಹಿಜಬ್ ಧರಿಸಲು ಒತ್ತಾಯಿಸಿದೆ ಎಂದು ವಿಶ್ವಹಿಂದೂ ಪರಿಷತ್ (VHP), ಬಜರಂಗದಳ ಹಾಗೂ ABVP ಸಂಘಟನೆಗಳು ಆರೋಪಿಸಿದ್ದು, ಅಲ್ಲಿನ ಸಿಎಂ ಕೂಡ ತನಿಖೆಗೆ ಆದೇಶಿಸಿದ್ದಾರೆ.

ಹಿಜಬ್ ಧರಿಸಿದ ಆರೋಪಗಳು ಕೇಳಿಬರುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಅವರು ದಾಮೋಹ್ ಜಿಲ್ಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದರು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸಹ ತನಿಖೆಗೆ ಆದೇಶಿಸಿದ್ದರು. ಈ ನಡುವೆ ಜಿಲ್ಲಾ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿನಿಯರ ಕುಟುಂಬವನ್ನು ಸಂಪರ್ಕಿಸಿದಾಗ ಈ ಸಂಬಂಧ ಪೋಷಕರು ಯಾವುದೇ ದೂರು ನೀಡಿರಲಿಲ್ಲ ಎಂಬುದು ಕಂಡುಬಂದಿತ್ತು. ಇದನ್ನೂ ಓದಿ: ಹಿಂದೂ ಹೆಣ್ಮಕ್ಕಳಿಗೂ ಹಿಜಬ್ ಕಡ್ಡಾಯಗೊಳಿಸಿತಾ ಈ ಶಾಲೆ?

ಈ ನಡುವೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಮುಷ್ತಾಖ್ ಮೊಹಮ್ಮದ್, ಇಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಲ್ಲ, ಬದಲಿಗೆ ಸ್ಕಾರ್ಫ್ ಧರಿಸಿದ್ದಾರೆ. ಇದು ಶಾಲಾ ಡ್ರೆಸ್‌ಕೋಡ್‌ನ ಭಾಗವಾಗಿದೆ. ಇಲ್ಲಿ ಯಾವುದೇ ವಿದ್ಯಾರ್ಥಿನಿಯರ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿ ನಾವು ನಡೆದುಕೊಳ್ಳಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಕೋಮು ಸಂಘರ್ಷ: ಅನಧಿಕೃತ ಶಸ್ತ್ರಾಸ್ತ್ರಗಳನ್ನು ಕೂಡಲೇ ಒಪ್ಪಿಸಿ – ದಂಗೆಕೋರರಿಗೆ ಅಮಿತ್‌ ಶಾ ವಾರ್ನಿಂಗ್‌

HIJAB 2

ಇನ್ನೂ ಈ ಸಂಬಂಧ ತನಿಖೆಗೆ ಆದೇಶಿಸಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಯಾವುದೇ ಶಾಲೆಯೂ ಹೆಣ್ಣುಮಕ್ಕಳು ಹಿಜಬ್ ಧರಿಸುವಂತೆ ಒತ್ತಾಯಿಸುವುದಿಲ್ಲ. ಅದು ಅವರ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೂ ಹೊಂದಿಕೆಯಾಗಲ್ಲ. ದಾಮೋಹ್ ಜಿಲ್ಲೆ ಶಾಲೆಯ ವಿಷಯ ನನ್ನ ಗಮನಕ್ಕೆ ಬಂದಿದೆ. ನಾನು ಸ್ಥಳೀಯ ಆಡಳಿತಕ್ಕೆ ತನಿಖೆ ನಡೆಸಲು ಪೂರ್ಣ ಅನುಮತಿ ನೀಡಿದ್ದೇನೆ. ಸೂಕ್ತ ಆಧಾರಗಳ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.