ಕೀಕೀ, ಫಿಟ್ನೆಸ್ ಚಾಲೆಂಜ್ ನಂತ್ರ ನವರಾತ್ರಿಗೆ ಬಂತು ಬಿಗ್ ಬಿಂದಿ ಚಾಲೆಂಜ್

ಬೆಂಗಳೂರು: ಕೀಕೀ ಚಾಲೆಂಜ್, ಫಿಟ್ನೆಸ್ ಚಾಲೆಂಜ್, ಮದರ್ ಹುಡ್ ಚಾಲೆಂಜ್ ನಂತರ ಈಗ ನವರಾತ್ರಿಗೆ ಅಂತಾನೆ ಸ್ಪೆಷಲ್ ಬಿಗ್ ಬಿಂದಿ ಚಾಲೆಂಜ್ ಶುರುವಾಗಿದೆ.

ಸೋದರಿ ನಿವೇದಿತಾ ಪ್ರತಿಷ್ಠಾನದವರು ದಸರಾ ನವದುರ್ಗೆಯರ ಆರಾಧನೆ ಜೊತೆಗೆ ನಮ್ಮ ಸಂಪ್ರದಾಯವನ್ನು ಪಸರಿಸುವಂತೆ ಮಾಡುವ ಸಲುವಾಗಿ ಬಿಗ್ ಬಿಂದಿ ಚಾಲೆಂಜ್ ಶುರು ಮಾಡಿದ್ದಾರೆ. ಇದು ಸಿಂಪಲ್ ಚಾಲೆಂಜ್, ನೀವು ಹಣೆಗೆ ದೊಡ್ಡ ಬಿಂದಿಯನ್ನಿಟ್ಟು ಸೆಲ್ಫಿ ತೆಗೆದು ಫೇಸ್‍ಬುಕ್‍ಗೆ ಹಾಕುವುದು ಅಷ್ಟೆ. ಹೀಗೆ ಎರಡೇ ದಿನದಲ್ಲಿ ಸಾವಿರಾರು ಜನ ಚಾಲೆಂಜ್ ಸ್ವೀಕರಿಸಿ ತಮ್ಮ ಫೇಸ್‍ಬುಕ್ ಅಕೌಂಟ್ ನಲ್ಲಿ ಸೆಲ್ಫಿ ಹಾಕಿಕೊಂಡಿದ್ದಾರೆ.

ಕುಂಕುಮ ಅಥವಾ ಬಿಂದಿ ಹಣೆಗೆ ಇಟ್ಟುಕೊಳ್ಳುವುದನ್ನು ಇಂದಿನ ಜನರೇಷನ್‍ಗೆ ತಿಳಿಹೇಳಬೇಕಿರುವ ಪರಿಸ್ಥಿತಿ ಬಂದಿದೆ. ಆದರೆ ನಾವು ಶುರು ಮಾಡಿರುವ ಬಿಗ್ ಬಿಂದಿ ಚಾಲೆಂಜ್ ಸಾಕಷ್ಟು ಹೆಣ್ಮಕ್ಕಳು ಈಗಲೂ ನಾವು ನಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ ಅಂತ ತೋರಿಸಿಕೊಡುತ್ತಿದ್ದಾರೆ ಎಂದು ನಿವೇದಿತಾ ಪ್ರತಿಷ್ಠಾನದವರಾದ ವೀಣಾ ಹೇಳಿದ್ದಾರೆ.

ಫ್ಯಾಶನ್ ಇರಬೇಕು ಹಾಗಂತ ನಮ್ಮ ಸಂಪ್ರದಾಯಗಳನ್ನು ಮರೆಯಬಾರದು ಅಂತ ಚಾಲೆಂಜ್ ಸ್ವೀಕರಿಸಿದವರು ಹೇಳುತ್ತಿದ್ದಾರೆ. ನಾನು ಸೆಲ್ಫಿ ತೆಗೆದು ಫೇಸ್‍ಬುಕ್‍ಗೆ ಹಾಕಿದಾಗ ಕೆಲವರು ಸಪೋರ್ಟ್ ಮಾಡಿದರು. ಕೆಲವರು ಓವರ್ ಆಕ್ಟಿಂಗ್ ಎಂದು ಹೇಳಿದರು ಎಂದು ಚಾಲೆಂಜ್ ಸ್ವೀಕರಿಸಿದ ನಾಗರತ್ನ ಹೇಳಿದ್ದಾರೆ.

ಕೀಕೀ ಚಾಲೆಂಜ್ ಸ್ವೀಕರಿಸಿ ಜನರಿಗೆ ತೊಂದರೆ ಕೊಡುವುದಕ್ಕಿಂತ, ಆರೋಗ್ಯಕರ, ಸಂಪ್ರದಾಯ ಬದ್ಧವಾದ ಬಿಗ್ ಬಿಂದಿ ಚಾಲೆಂಜ್ ಎಷ್ಟೋ ವಾಸಿ ಎಂದು ಮಹಿಳಾ ಮಣಿಗಳು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *