ದೀಪಿಕಾ ಪಡುಕೋಣೆ ಬಳಿಕ ಆಲಿಯಾ ಭಟ್‌ಗೆ ನಾಗ್ ಅಶ್ವಿನ್ ಆ್ಯಕ್ಷನ್ ಕಟ್?

‘ಕಲ್ಕಿ 2898 ಎಡಿ’ ಚಿತ್ರದ ಸಕ್ಸಸ್‌ ಖುಷಿಯಲ್ಲಿದ್ದಾರೆ ನಾಗ್‌ ಅಶ್ವಿನ್.‌ ದೀಪಿಕಾ ಪಡುಕೋಣೆಗೆ (Deepika Padukone) ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ನಾಗ್‌ ಅಶ್ವಿನ್‌ ಅವರು ಆಲಿಯಾ ಭಟ್‌ಗೆ ಡೈರೆಕ್ಷನ್‌ ಮಾಡಲು ಸಜ್ಜಾಗಿದ್ದಾರೆ ಎನ್ನಲಾದ ವಿಚಾರವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಹೆಜ್ಜೆ ಹಾಕಲು 2 ಕೋಟಿ ಸಂಭಾವನೆ ಚಾರ್ಜ್ ಮಾಡಿದ್ರಾ ಶ್ರೀಲೀಲಾ?

‘ಕಲ್ಕಿ 2898 ಎಡಿ’ ಚಿತ್ರ ಸಕ್ಸಸ್ ಕಂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟಿ ದೀಪಿಕಾ ಅವರು ಪ್ರಭಾಸ್‌ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದರು. ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದರು. ಈ ಬೆನ್ನಲ್ಲೇ, ಮಹಿಳಾ ಪ್ರಧಾನ ಚಿತ್ರ ಮಾಡಲು ಅವರು ಮುಂದಾಗಿದ್ದಾರೆ. ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಆಲಿಯಾರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಆಲಿಯಾ (Alia Bhatt) ಜೊತೆ ನಾಗ್ ಅಶ್ವಿನ್ (Nag Ashwini) ಒಂದು ಹಂತದ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಕಥೆ ಕುರಿತು ಚರ್ಚಿಸಿದ್ದಾರೆ. ಆದರೆ ನಟಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ರಾ? ಎಂಬುದು ಖಾತ್ರಿಯಾಗಿಲ್ಲ. ಅಧಿಕೃತವಾಗಿ ಚಿತ್ರತಂಡದಿಂದ ಅಪ್‌ಡೇಟ್ ಬರುವವರೆಗೂ ಕಾಯಬೇಕಿದೆ.

ಈಗಾಗಲೇ ಕೀರ್ತಿ ಸುರೇಶ್ ಜೊತೆ ‘ಮಹಾನಟಿ’, ದೀಪಿಕಾ ಜೊತೆ ‘ಕಲ್ಕಿ 2898 ಎಡಿ’ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. 2 ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಾಗ್ ಅಶ್ವಿನ್ ಮುಂಬರುವ ಸಿನಿಮಾಗಳ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.