ಆಸ್ಟ್ರೇಲಿಯಾದಲ್ಲಿರೋ ರಶ್ಮಿಕಾ ಮಂದಣ್ಣಗೆ VD ಹೆಸರು ಹೇಳಿ ಕಾಲೆಳೆದ ನೆಟ್ಟಿಗರು

ಪ್ಯಾನ್ ಇಂಡಿಯಾ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇದೀಗ ಬಹುಭಾಷಾ ನಾಯಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ನಡುವೆ ಇತ್ತೀಚೆಗೆ ಜಪನ್‌ಗೆ ಹೋಗಿ ಬಂದಿದ್ದ ರಶ್ಮಿಕಾ ಇದೀಗ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದ್ದಾರೆ.‌ ಇದನ್ನೂ ಓದಿ:ನನಗೆ ಮತ್ತೊಂದು ಮದುವೆಗೆ ಅವಕಾಶವಿದೆ: ರಾಖಿ ಬಾಯ್ ಫ್ರೆಂಡ್ ಆದಿಲ್ ಮಾತು

ಸೌತ್-ಬಾಲಿವುಡ್‌ನಲ್ಲಿ ಸದ್ಯ ರಶ್ಮಿಕಾ ಮಂದಣ್ಣ ಅವರದ್ದೇ ಹವಾ. ಕೈತುಂಬಾ ಸಿನಿಮಾಗಳು ಕೈಯಲಿಟ್ಟುಕೊಂಡು ತಮ್ಮ ನಟನೆಯ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಕೆಲದಿನಗಳ ಹಿಂದೆ ಜಪಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸುವ ಮೂಲಕ ನಟಿ ಸುದ್ದಿಯಾಗಿದ್ದರು. ಈಗ ಆಸ್ಟ್ರೇಲಿಯಾ ಅಂಗಳಕ್ಕೆ ಕನ್ನಡತಿ ಕಾಲಿಟ್ಟಿದ್ದಾರೆ.

ಆಸ್ಟ್ರೇಲಿಯಾಗೆ ಎಂಟ್ರಿ ಕೊಡ್ತಿದ್ದಂತೆ ಗೊಂಬೆ ಹಿಡ್ಕೊಂಡು ನಟಿ ಪೋಸ್ ನೀಡಿದ್ದಾರೆ. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಟಿ ಫೋಟೋವನ್ನು ಶೇರ್ ಮಾಡ್ತಿದ್ದಂತೆ ಗೊಂಬೆ ಹಿಡ್ಕೊಂಡು ಆಟ ಆಡೋ ವಯಸ್ಸಾ ಇದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಎಲ್ಲಿ ಎಂದು ರಶ್ಮಿಕಾಗೆ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

ಯಾವ ವಿಚಾರಕ್ಕೆ ರಶ್ಮಿಕಾ ಆಸ್ಟ್ರೇಲಿಯಾಗೆ ಹೋಗಿದ್ದಾರೆ ಎಂದು ರಿವೀಲ್ ಆಗಿಲ್ಲ. ಸಿನಿಮಾ ಶೂಟಿಂಗ್ ಅಥವಾ ವೆಕೇಷನ್ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಸದ್ಯ ಪುಷ್ಪ 2 (Pushpa 2), ಅನಿಮಲ್ 2, ಗರ್ಲ್‌ಫ್ರೆಂಡ್, ರೈನ್‌ಬೋ, ಚಾವಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ. ಇತ್ತೀಚೆಗೆ ಕನ್ನಡ ಸಿನಿಮಾದಲ್ಲಿ ನಟಿಸೋದಾಗಿ ಕೂಡ ನಟಿ ಸಿಹಿಸುದ್ದಿ ಕೊಟ್ಟಿದ್ದಾರೆ. ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.