ಎಕ್ಸಾಂನಲ್ಲಿ ಫೇಲ್ – ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ

ನವದೆಹಲಿ: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 19 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ದೆಹಲಿಯ ಐಟಿಒನಲ್ಲಿರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ಮಹಿಳಾ ಹಾಸ್ಟೆಲ್‍ನಲ್ಲಿ ಯುವತಿ ತನ್ನ ಕೋಣೆಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿಯನ್ನು ದಿವ್ಯಾ ಯಾದವ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೋವಿಡ್‌ ಲಸಿಕೆಯ 4ನೇ ಬೂಸ್ಟರ್‌ ಡೋಸ್‌ಗೆ ಇಸ್ರೇಲ್‌ ಅನುಮೋದನೆ

ಇತ್ತೀಚೆಗೆ ನಡೆದ ಪರೀಕ್ಷೆಯ ಎರಡು ಪೇಪರ್ ಗಳಲ್ಲಿ ದಿವ್ಯಾ ಫೇಲ್ ಆಗಿದ್ದಾಳೆ ಎಂದು ಆಕೆಯ ರೂಮ್ ಮೇಟ್‌ಗಳು ತಿಳಿಸಿದ್ದಾರೆ. ಡಿಸೆಂಬರ್ 29 ರ ಸಂಜೆ ಫಲಿತಾಂಶ ಪ್ರಕಟನೆಗೊಂಡಿದ್ದು, ಅಂದಿನಿಂದ ದಿವ್ಯಾ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

ಬೆಳಗ್ಗೆ ಕೊಠಡಿ ಸಂಖ್ಯೆ 64ರಲ್ಲಿ ಯಾರೂ ಇಲ್ಲದ ವೇಳೆ ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಲ್ಲದೇ ಕೊಠಡಿಯ ಒಳಗಿನಿಂದ ಚಿಲಕ ಹಾಕಿದ್ದ ಕಾರಣ ಹಾಸ್ಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದು ತೆರೆದರು. ಈ ವೇಳೆ ರಿಜಿಸ್ಟರ್‌ನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಇದೀಗ ದಿವ್ಯಾ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಆಕೆಯ ಕುಟುಂಬಕ್ಕೆ ಪೊಲೀಸರು ಹಸ್ತಾಂತರಿಸಲಿದ್ದಾರೆ.

Comments

Leave a Reply

Your email address will not be published. Required fields are marked *