ಟಾಲಿವುಡ್ ನಲ್ಲಿ ಯೋಧಳಾಗಿ ಸನ್ನಿ ಲಿಯೋನ್ ಮಿಂಚಿಂಗ್!

ಹೈದರಾಬಾದ್: ಸನ್ನಿ ಲಿಯೋನ್ ಈಗ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಯೋಧಳಾಗಿ ವಿರೋಧಿ ಪಡೆಯ ವಿರುದ್ಧ ಹೋರಾಟ ಮಾಡಲಿದ್ದಾರೆ.

ಹೌದು. ಈ ವರ್ಷ ಸನ್ನಿಲಿಯೋನ್ ತೆಲುಗು ಭಾಷೆಯ `ವೀರಮಾದೇವಿ’ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ. ತೆಲುಗು ಭಾಷೆಯಲ್ಲಿ ಇದು ಇವರ ಮೊದಲ ಚಿತ್ರವಾಗಿದ್ದು, ಇದರಲ್ಲಿ ಸನ್ನಿ ಯೋಧಳಾಗಿ ಹೋರಾಟ ಮಾಡಲಿದ್ದಾರೆ. ಒಟ್ಟಿನಲ್ಲಿ ಈ ಚಿತ್ರದಲ್ಲಿ ಸನ್ನಿ ಪಾತ್ರ ಅದ್ಭುತವಾಗಿದ್ದು, ಪ್ರತಿಯೊಬ್ಬರನ್ನು ತಲೆಬಾಗಿಸುವಂತೆ ಮಾಡುತ್ತದೆ.

ಸನ್ನಿ ಈಗಾಗಲೇ ಈ ಚಿತ್ರಕ್ಕೆ ಸಹಿ ಮಾಡಿದ್ದು, ಸದ್ಯ ಚೆನ್ನೈ ನಲ್ಲಿ ಈ ಚಿತ್ರ ಚಿತ್ರೀಕರಣ ನಡೆಯುತ್ತಿದೆ. ವಿಸಿ ವಾಡಿವುದೈಯಾನ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಆದ್ರೆ ಸಿನಿಮಾ ನಿರ್ಮಾಪಕರು ಈ ಚಿತ್ರತಮಿಳು ಹಾಗೂ ಮಲೆಯಾಳಂನಲ್ಲೂ ಬಿಡುಗಡೆಯಾಗಬೇಕೆಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ತೆಲುಗು ಭಾಷೆಯಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸನ್ನಿ ಅವರು, ಸಿನಿ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಬಯಸಿದ್ದಾರೆ.

2018ರ ಹೊಸ ವರ್ಷಾಚರಣೆಗೆ ನಟಿ ಸನ್ನಿ ಲಿಯೋನ್ ಅವರನ್ನು ಬೆಂಗಳೂರಿಗೆ ಆಹ್ವಾನ ಮಾಡಲಾಗಿತ್ತು. ಆದ್ರೆ ಇದಕ್ಕೆ ಕನ್ನಡ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹೊಸ ವರ್ಷದ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ.

ಇದರಿಂದ ಬೇಸರಗೊಂಡು ಟ್ವೀಟ್ ಮಾಡಿದ್ದ ಸನ್ನಿ, ನನ್ನಿಂದ ತೊಂದರೆಯಾಗುತ್ತಿದೆ ಅಂತಂದ್ರೆ ಬರಲ್ಲ. ನನಗಿಂತಲೂ ನನ್ನ ಅಭಿಮಾನಿಗಳ ರಕ್ಷಣೆ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತ ಟ್ವೀಟ್ ನಲ್ಲಿ ಹೇಳಿದ್ದರು.

Comments

Leave a Reply

Your email address will not be published. Required fields are marked *