ಚೆನ್ನೈ: ಮಾಜಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮನನೊಂದ ನಟಿ ನಿಳನಿ ಸೊಳ್ಳೆ ಬತ್ತಿ ತಿಂದಿರುವ ಘಟನೆ ವಲಸರವಕ್ಕಂನಲ್ಲಿ ನಡೆದಿದೆ.
ನಿಳನಿ ಮಾಜಿ ಪ್ರಿಯಕರ ಗೌರಿ ಲಲಿತ್ ಕುಮಾರ್ ಗುರುವಾರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ನಿಳನಿ ಸೊಳ್ಳೆ ಬತ್ತಿ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದರು. ನೆರೆಹೊರೆಯವರು ಕೂಡಲೇ ನಳಿನಿ ಅವರನ್ನು ಸ್ಥಳೀಯರು ಕೂಡಲೇ ರೊಯಪೆಟ್ಟಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ದೂರು ನೀಡಿದ್ದ ನಿಳಿನಿ: ಕೆಲವು ದಿನಗಳ ಹಿಂದೆ ಗೌರಿ ಲಲಿತ್ ಮತ್ತು ನನ್ನ ನಡುವೆ ಬ್ರೇಕಪ್ ಆಗಿದೆ. ಆತ ನನ್ನನ್ನು ಹಿಂಬಾಲಿಸುವ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮೈಲಾಪುರ ಪೊಲೀಸ್ ಠಾಣೆಯಲ್ಲಿ ಗೌರಿ ಲಲಿತ್ ವಿರುದ್ಧ ಭಾನುವಾರ ದೂರು ದಾಖಲಿಸಿದ್ದರು.
ದೂರು ದಾಖಲಾದ ಬಳಿಕ ಗೌರಿ ಲಲಿತ್ ಆತ್ಮಹತ್ಯೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇತ್ತ ಗೌರಿ ಲಲಿತ್ ಸಾವಿನ ಸುದ್ದಿ ತಿಳಿದ ನಿಳಿನಿ ಆತ್ಮಹತ್ಯೆ ಯತ್ನಿಸಿದ್ದಾರೆ. ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply