ಜೈಪುರ: ಅಘೋಷಿತ ಶಾಪಕ್ಕೆ ಗುರಿಯಾಗಿದ್ದ ರಾಜಸ್ಥಾನದ ದೋಲ್‍ಪುರ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮದುವೆಯ ಸಂಭ್ರಮ ಮನೆ ಮಾಡಿದೆ.
1996 ರಲ್ಲಿ ಈ ಗ್ರಾಮದಲ್ಲಿ ಮದುವೆಯ ಕಾರ್ಯಕ್ರಮ ನಡೆದಿತ್ತು. ಮತ್ತೆ 22 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಯಾವುದೇ ಮೂಲಭೂತ ಸೌಲಭ್ಯಗಳನ್ನು ಹೊಂದಿರದ ಈ ಹಳ್ಳಿಗೆ ವಿದ್ಯುತ್, ರಸ್ತೆ, ನೀರು ಕೂಡ ಇಲ್ಲ. ಗ್ರಾಮಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಇಲ್ಲಿನ ಯುವಕರಿಗೆ ಹೆಣ್ಣು ನೀಡಲು ಯಾರು ಮುಂದೇ ಬರುತ್ತಿರಲಿಲ್ಲ. ಅದ್ದರಿಂದ ಇಲ್ಲಿನ ಯುವಕರು ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಗ್ರಾಮದ ಪವನ್ ಎಂಬ ಯುವಕನಿಗೆ ಮದುವೆ ನಿಶ್ಚಾಯವಾಗಿದ್ದು, ಹಳ್ಳಿಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.

ಈ ಗ್ರಾಮದಲ್ಲಿ 40 ಕಚ್ಚಾ ಮನೆಗಳಿದ್ದು, 300 ಜನ ವಾಸಿಸುತ್ತಿದ್ದಾರೆ. ಗ್ರಾಮಸ್ಥರನ್ನು ಬಡತನ ಕಾಡುತ್ತಿದೆ. ಸರ್ಕಾರದ ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮಕ್ಕೆ ಒಂದು ಶಾಲೆ ಹಾಗೂ ನೀರಿನ ಕೈ ಪಂಪ್ ನೀಡಿದೆ. ಹಳ್ಳಿಯಲ್ಲಿರುವ 125 ಮಹಿಳೆಯಲ್ಲಿ ಕೇವಲ ಇಬ್ಬರು ಮಾತ್ರ ತಮ್ಮ ಹೆಸರನ್ನು ಬರೆಯುತ್ತಾರೆ. ಅಲ್ಲದೆ ಇದುವರೆಗೂ ಹಳ್ಳಿಯ ಯಾವುದೇ ಮಹಿಳೆಯರು ಟಿವಿಯನ್ನು ನೋಡಿಲ್ಲ.


Leave a Reply