4 ಲಕ್ಷ ಇನ್‍ಸ್ಟಾ ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟ ಮಾಡೆಲ್

ವಾಷಿಂಗ್ಟನ್: ತನ್ನನ್ನು ತಾನು ಇನ್‍ಸ್ಟಾಗ್ರಾಂ ಮಾಡೆಲ್ ಎಂದು ತಿಳಿದಿರುವ ಯುವತಿಯೊಬ್ಬಳು ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟಿದ್ದಾಳೆ.

22 ವರ್ಷದ ಯುವತಿ ಇನ್‍ಸ್ಟಾಗ್ರಾಂನಲ್ಲಿ 4,50,000 ಫಾಲೋವರ್ಸ್​​​ಗಳನ್ನು ಹೊಂದಿದ್ದಾಳೆ. ಅಲ್ಲದೆ ಯುವತಿ ತನ್ನ ಪ್ರಿಯಕರನ ಜೊತೆ ರಜೆ ದಿನಗಳನ್ನು ಕಳೆಯಲು ಮೆಕ್ಸಿಕೋಗೆ ಹೋಗಿದ್ದಳು. ಈ ವೇಳೆ ಪ್ರಿಯಕರ ತನ್ನ ಜೊತೆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲು ಹೇಳಿದ್ದಾನೆ. ಆದರೆ ಯುವತಿ ಫೋಟೋ ಅಪ್ಲೋಡ್ ಮಾಡಿದ್ದರೆ ಫಾಲೋವರ್ಸ್ ಹಾಗೂ ಬುಸಿನೆಸ್ ಪ್ರಾಯೋಜಕರು ಕಡಿಮೆ ಆಗುತ್ತಾರೆ ಎಂಬ ಭಯದಿಂದ ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ.

ಯುವತಿ IGAZmodel ಎಂಬ ಹೆಸರಿನಲ್ಲಿ ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದಾಳೆ. ಯುವತಿ ತನ್ನ ರೇಡಿಟ್ ಅಕೌಂಟ್‍ನಲ್ಲಿ, ನಾನು ಯಶಸ್ವಿ ಇನ್‍ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದೇನೆ. ನನ್ನ ಪ್ರಿಯಕರನ ಜೊತೆಗಿರುವ ಫೋಟೋವನ್ನು ಹಂಚಿಕೊಂಡರೆ ನನ್ನ ಹಾಗೂ ನನ್ನ ಫಾಲೋವರ್ಸ್ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನನಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಬಹುದು ಎಂದು ಬರೆದುಕೊಂಡಿದ್ದಾಳೆ.

ನಾವು ಎಷ್ಟು ಬೇಕಾದರೂ ಪ್ರೈವೇಟ್ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು, ನಾವು ಲಾಂಗ್ ವಾಕ್‍ಗೆ ಹೋಗಬಹುದು, ಸೆಕ್ಸ್ ಮಾಡಬಹುದು, ಸ್ವಿಮ್ಮಿಂಗ್ ಪೂಲ್‍ನಲ್ಲಿ ಮಲಗುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನನಗೆ ನನ್ನ ಇನ್‍ಸ್ಟಾಗ್ರಾಂ ಖಾತೆ ಪ್ರತ್ಯೇಕವಾಗಿರಬೇಕು ಎಂದು ಅದರಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ಅಲ್ಲದೆ ತನ್ನ ಪ್ರಿಯಕರ ಹೆಸರನ್ನು ಹಾಗೂ ವಯಸ್ಸನ್ನು ಕೂಡ ಹೇಳಲಿಲ್ಲ. ಈ ಬಗ್ಗೆ ಮಾತನಾಡಿದ ಯುವತಿ, ನಾನು ವಸ್ತುಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಮಾರಾಟ ಮಾಡುತ್ತೇನೆ. ನಾನು ನನ್ನ ಪ್ರಿಯಕರನ ಜೊತೆಯಿರುವ ಫೋಟೋ ಹಾಕಿದರೆ, ನನ್ನ ಬಿಸಿನೆಸ್ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾಳೆ. ಇತ್ತ ಪ್ರಿಯಕರ ನಾನು ತುಂಬಾ ದುಃಖದಲ್ಲಿದ್ದೇನೆ. ಆಕೆಯ ಜೊತೆ ರಜೆಗೆ ಹೋದಾಗ ನಾನು ಸಾಕಷ್ಟು ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾನೆ.

Comments

Leave a Reply

Your email address will not be published. Required fields are marked *