ಕಾಬೂಲ್: ಅಘ್ಘಾನಿಸ್ತಾನದಲ್ಲಿ ತಾಲಿಬಾನಿ ಆಡಳಿತ ನಿನ್ನೆಯಿಂದ ಆರಂಭವಾಗಿದೆ. ನಿನ್ನೆ ರಾಜಧಾನಿ ಕಾಬೂಲ್ ನಗರವನ್ನು ತಾಲಿಬಾನ್ ಉಗ್ರರು ನಿಯಂತ್ರಣಕ್ಕೆ ತೆಗೆದುಕೊಂಡರು. ಇದಕ್ಕೂ ಮೊದಲೇ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ತನ್ನ ಆಪ್ತರೊಂದಿಗೆ ಉಜ್ಭೇಕಿಸ್ಥಾನದ ತಾಷ್ಕೆಂಟ್‍ಗೆ ಓಡಿ ಹೋಗಿ ತಲೆ ಮರೆಸಿಕೊಂಡಿದ್ದಾರೆ. ಈ ಎಲ್ಲದರ ನಡುವೆ ಅಘ್ಘಾನಿಸ್ಥಾನವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಇಂದು ರಾತ್ರಿ ಭಾಷಣ ಮಾಡಲಿದ್ದಾರೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ತಾಲಿಬಾನಿಗಳ ಅಟ್ಟಹಾಸ ಅಘ್ಘಾನಿಸ್ತಾನದಲ್ಲಿ ಆರಂಭವಾಗುತ್ತಿದ್ದಂತೆ ಅಲ್ಲಿನ ನಾಗರೀಕರು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಸಿಕ್ಕ, ಸಿಕ್ಕ ವಿಮಾನವೇರಿ ದೇಶ ತೊರೆಯುತ್ತಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ನೇತೃತ್ವದಲ್ಲಿ ತಾಲಿಬಾನ್‍ಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಜೊ ಬೈಡನ್ ಅಘ್ಫಾನ್ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದಾಗಿ ತಿಳಿಸಿರುವುದು ಬಾರಿ ಕೂತುಹಲ ಮೂಡಿಸಿದೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

ತಾಲಿಬಾನಿಗಳ ವಶಕ್ಕೆ ಅಫ್ಘಾನಿಸ್ತಾನ ಒಳಪಡುತ್ತಿದ್ದಂತೆ. ಅಮೆರಿಕಾದಲ್ಲಿ ಅಫ್ಘಾನ್ ಪ್ರಜೆಗಳಿಂದ ಪ್ರತಿಭಟನೆ ನಡೆಯಿತು. ವೈಟ್ ಹೌಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅಘ್ಘಾನ್ ಪ್ರಜೆಗಳು ಅಲ್ಲಿ ನಡೆಯುತ್ತಿರುವ ಘಟನೆಗೆ ಅಮೆರಿಕ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜೊ ಬೈಡನ್ ವಿರುದ್ಧ ಘೋಷಣೆ ಕೂಗಿದರು. ಇದನ್ನೂ ಓದಿ: ಅಫ್ಘಾನಿಸ್ತಾನದ ಸ್ಥಿತಿ ಘನಘೋರ – ವಿಮಾನದಿಂದ ಬಿದ್ದು ಮೂವರು ಸಾವು
I will be addressing the nation on Afghanistan at 3:45 PM ET today.
— President Biden Archived (@POTUS46Archive) August 16, 2021
ಅಫ್ಘಾನ್ ನಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾ ತನ್ನ ಕುತಂತ್ರ ಬುದ್ಧಿ ತೋರಿಸಲು ಮುಂದಾಗಿದೆ. ತಾಲಿಬಾನ್ ಸರ್ಕಾರದ ಜೊತೆಗೆ ಕೈಜೊಡಿಸಲು ಮುಂದಾಗಿರುವ ಚೀನಾ, ತಾಲಿಬಾನ್ ಜೊತೆ ಸ್ನೇಹ ಸಂಬಂಧ ಬೆಳೆಸಲು ಸಿದ್ಧ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

Leave a Reply