ವಕೀಲರು Vs ಪೊಲೀಸರು – ಫೇಸ್‌ಬುಕ್‌ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?

ರಾಮನಗರ: ವಕೀಲರು (Lawyers) ಮತ್ತು ಪೊಲೀಸರ (Police) ಮಧ್ಯೆ ವಾರದಿಂದ ನಡೆಯುತ್ತಿರುವ ಪ್ರತಿಭಟನೆ (Protest) ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರತಿಭಟನೆಗೆ ಮೂಲ ಕಾರಣವಾಗಿದ್ದು ಒಂದು ಫೇಸ್‌ಬುಕ್‌ ಪೋಸ್ಟ್‌

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ (Gyanvapi Mosque) ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಸ್​ಡಿಪಿಐ ಕಾರ್ಯಕರ್ತ, ವಕೀಲ ಚಾಂದ್ ಪಾಷಾ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದ.

ನ್ಯಾಯಾಧೀಶರ ವಿರುದ್ಧವೇ ಪೋಸ್ಟ್‌ ಹಾಕಿದ್ದಕ್ಕೆ ಹಿಂದೂಪರ ಕಾರ್ಯಕರ್ತರು ಎಸ್‌ಪಿ ಹಾಗೂ ವಕೀಲರ ಸಂಘಕ್ಕೆ ದೂರು ನೀಡಿದ್ದರು. ಈ ಸಂಬಂಧ ವಕೀಲ ಚಾನ್ ಪಾಷಾ ಮೇಲೆ ಎಫ್‌ಐಆರ್‌ ದಾಖಲಾಗಿ ಬಂಧಿಸಲಾಗಿತ್ತು.  ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ

ನ್ಯಾಯಾಂಗ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಚಾನ್ ಪಾಷಾ ಮೇಲೆ ವಕೀಲರ ಸಂಘ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ವೇಳೆ ಚಾನ್ ಪಾಷಾ ಬೆಂಬಲಿಗರು ವಕೀಲರ ಸಂಘಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದರು.

 

ಮನವಿ ನೀಡುವ ವೇಳೆ ವಕೀಲರ ಸಂಘದ ಆವರಣದಲ್ಲಿ ಚಾನ್ ಪಾಷಾ ಬೆಂಬಲಿಗರು ಹಾಗೂ ವಕೀಲರ ನಡುವೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಚಾನ್ ಪಾಷಾ ಬೆಂಬಲಿಗರ ವಿರುದ್ಧ ವಕೀಲರು ದೂರು ನೀಡಿದ್ದರು. ಈ ಸಂಬಂಧ ಎಫ್ಐಆರ್ ದಾಖಾಲಾಗಿತ್ತು. ನಂತರ ಚಾನ್ ಪಾಷಾ ಬೆಂಬಲಿಗರಿಂದ ಪ್ರತಿ ದೂರು ದಾಖಲಾಯಿತು.

ವಕೀಲರ ಸಂಘಕ್ಕೆ ನಾವು ಮನವಿ ಮಾಡಿಕೊಡಲು ಹೋದ ವೇಳೆ ನಮ್ಮ‌ ಮೇಲೆ ಹಲ್ಲೆ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ರಫೀಕ್‌ ಖಾನ್‌ ಎಂಬವರು ದೂರು ನೀಡಿದ್ದರು. ದೂರು ಸ್ವೀಕರಿಸಿ 40 ವಕೀಲರ ಮೇಲೆ ಐಜೂರು ಪಿಎಸ್ ಐ ತನ್ವೀರ್ ಎಫ್ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರ ಪ್ರತಿಭಟನೆ

ಗಲಾಟೆ ವೇಳೆ ಸ್ಥಳದಲ್ಲಿ ಇಲ್ಲದ ವಕೀಲರ ಮೇಲೂ ಸುಳ್ಳು ಎಫ್‌ಐಆರ್‌ ದಾಖಲು ಮಾಡಲಾಗಿದೆ ಎನ್ನುವುದು ವಕೀಲರ ವಾದ. ನಂತರ ಸುಳ್ಳು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆರೋಪಿಸಿ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದೇ ಇದ್ದಾಗ ಈಗ ಅಹೋರಾತ್ರಿ ಡಿಸಿ ಕಚೇರಿ ಮುಂದೆ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ.