ಅಡವಿ ಶೇಷ್, ಮೃಣಾಲ್ ನಟನೆಯ ‘ಡಕಾಯಿಟ್’ ಚಿತ್ರದ ಟೀಸರ್ ಔಟ್

ಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್ (Anurag Kashyap) ನಟನೆಯ ‘ಡಕಾಯಿಟ್’ ಚಿತ್ರದ (Dacoit) ಟೀಸರ್ ರಿಲೀಸ್ ಆಗಿದೆ. ಬಾಲಿವುಡ್ ನಟ ಅನುರಾಗ್ ಮತ್ತು ಅಡವಿ ಶೇಷ್ ಕಾಂಬಿನೇಷನ್ ಮಸ್ತ್ ಆಗಿದೆ. ಟೀಸರ್ ನೋಡಿರೋ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

ಟೀಸರ್ ಶುರುವಿನಲ್ಲೇ ಅಡವಿ ಶೇಷ್ ಖಡಕ್ ಡೈಲಾಗ್‌ನಿಂದ ಶುರುವಾಗಿದೆ. ಅನುರಾಗ್ ಕಶ್ಯಪ್ ಖಡಕ್ ಅವತಾರ, ಮೃಣಾಲ್ ನಟನೆ, ಹೀರೋ ಅಡವಿ ಶೇಷ್ ಅವರ ಆ್ಯಕ್ಷನ್ ಸೀನ್ ನೋಡಿದ್ರೆ ಭಯಂಕರ ಎಂದೆನಿಸುತ್ತಿದೆ. ಪ್ರೀತಿ, ದ್ರೋಹ, ಪ್ರತಿಕಾರದ ಕಥೆಯೇ ಡಕಾಯಿಟ್ ಚಿತ್ರವಾಗಿದ್ದು, ಇದರ ಬಗ್ಗೆ ಟೀಸರ್‌ನಲ್ಲಿ ಸುಳಿವು ಬಿಟ್ಟು ಕೊಟ್ಟಿದೆ. ಇದನ್ನೂ ಓದಿ: ಗರ್ಲ್‌ಫ್ರೆಂಡ್ ಗೌರಿ ಜೊತೆ ಆಮೀರ್ ಖಾನ್ ಲಂಚ್ ಡೇಟ್

‘ಮಹಾರಾಜ’ ಚಿತ್ರದ ಬಳಿಕ ಮತ್ತೊಮ್ಮೆ ದಕ್ಷಿಣದ ಸಿನಿಮಾ ‘ಡಕಾಯಿಟ್’ನಲ್ಲಿ ಬಾಲಿವುಡ್ ನಟ ಕಮ್ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ. ಈ ವರ್ಷದ ಅಂತ್ಯ ಡಿ.25ರಂದು ಸಿನಿಮಾ ರಿಲೀಸ್ ಆಗಲಿದೆ. ತೆಲುಗು, ತಮಿಳು, ಹಿಂದಿಯಲ್ಲಿ ರಿಲೀಸ್‌ಗೆ ಸಜ್ಜಾಗಿದೆ.

ಮೃಣಾಲ್ ಮುಂಬೈನ ಬಾಲಿವುಡ್ ನಟಿಯಾಗಿದ್ರು. ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ದಕ್ಷಿಣದ ಸಿನಿಮಾಗಳು. ಸೀತಾ ರಾಮಂ, ಹಾಯ್ ನಾನ್ನಾ, ಫ್ಯಾಮಿಲಿ ಸ್ಟಾರ್ ಚಿತ್ರಗಳು ಸಕ್ಸಸ್ ಕಂಡಿವೆ. ಈಗ ಮತ್ತೆ ‘ಡಕಾಯಿಟ್’ ಚಿತ್ರದ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.