ಹೊಸ ಹೊಸ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಅದಿತಿ ಪ್ರಭುದೇವ್, ಈಗ ಮತ್ತಷ್ಟು ವಿಭಿನ್ನ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ರಿಲೀಸ್ ಗೆ ರೆಡಿ ಆಗಿರುವ ತೋತಾಪುರಿಯಲ್ಲಿ ಅವರು ಮುಸ್ಲಿಂ ಹುಡುಗಿಯಾಗಿ ನಟಿಸುತ್ತಿದ್ದರೆ, ಧನಂಜಯ್ ನಟನೆಯ ಒನ್ಸ್ ಅಪಾನ್ ಅ ಟೈಮ್ ಜಮಾಲಿಗುಡ್ಡ ಚಿತ್ರದಲ್ಲಿ ಅವರದ್ದು ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರವಂತೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

ಕಲಾವಿದರು, ಕಲಾವಿದರ ವಯಸ್ಸು, ನಿರ್ದೇಶಕರು, ಬ್ಯಾನರ್ ಹೀಗೆ ಯಾವುದನ್ನೂ ನೋಡದೇ ತಮ್ಮ ಪಾತ್ರ ಅಚ್ಚುಕಟ್ಟಾಗಿದ್ದರೆ ಮತ್ತು ಅದು ಸವಾಲಿನ ಪಾತ್ರವಾಗಿದ್ದರೆ ಅದಿತಿ ಪ್ರಭುದೇವ್ ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗಾಗಿಯೇ ತೋತಾಪುರಿ ಸಿನಿಮಾದಲ್ಲಿ ಜಗ್ಗೇಶ್ ಅವರಿಗೆ ನಾಯಕಿಯಾದರೆ, ಜಮಾಲಿಗುಡ್ಡ ಚಿತ್ರದಲ್ಲಿ ಧನಂಜಯ್ ಗೆ ಜೊತೆಯಾಗಿದ್ದಾರೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ಈ ಎರಡೂ ಸಿನಿಮಾಗಳು ಅದಿತಿ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಬಲ್ಲವು. ತೋತಾಪುರಿಯಲ್ಲಿ ಒಂದು ರೀತಿಯಲ್ಲಿ ತಮಾಷೆಯಾಗಿ ಸಿನಿಮಾ ಸಾಗಿದರೆ, ಜಮಾಲಿಗುಡ್ಡ ಚಿತ್ರದಲ್ಲಿ ಬೇರೊಂದು ಪ್ರಪಂಚವೇ ಇರಲಿದೆ. ಎರಡೂ ಎರಡು ಬಗೆಯ ಚಿತ್ರವಾದ್ದರಿಂದ ಬೇರೆ ಬೇರೆ ವರ್ಗದ ಜನರಿಗೆ ಈ ಎರಡೂ ಪಾತ್ರಗಳು ಮುಟ್ಟುವುದಕ್ಕೆ ಸಾಧ್ಯವಾಗಲಿದೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

ಮೊನ್ನೆಯಷ್ಟೇ ಅದಿತಿ ಪ್ರಭುದೇವ್ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಬಹುಶಃ ಈ ವರ್ಷದ ಕೊನೆಯಲ್ಲಿ ಮದುವೆನೂ ಆಗಲಿದ್ದಾರೆ. ಮದುವೆಯ ನಂತರವೂ ಸಿನಿಮಾ ರಂಗದಲ್ಲೇ ಮುಂದುವರೆಯುವುದಾಗಿ ಅದಿತಿ ಹೇಳಿದ್ದಾರೆ. ಮದುವೆ ನಂತರ ಎಲ್ಲ ಬಗೆಯ ಪಾತ್ರಗಳನ್ನೂ ಮಾಡದೇ ಇರಬಹುದು. ಆದರೆ, ಒಂದೊಳ್ಳೆ ಪಾತ್ರಗಳನ್ನು ನಿರ್ವಹಿಸಿದ ತೃಪ್ತಿ ಅವರಲ್ಲಿ ಇದ್ದೇ ಇದೆ.

Leave a Reply