ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

ಬೆಂಗಳೂರು: ಬೀದಿಯಲ್ಲಿ ಮಲಗಿದ್ದ ನಾಯಿಗಳ ಮೇಲೆ ಉದ್ದೇಶಪೂರ್ವಕವಾಗಿಯೇ ಕಾರು ಹತ್ತಿಸಿ ವಿಕೃತಿ ಮೆರೆಯಲಾಗಿತ್ತು. ಉದ್ಯಮಿ, ಮಾಜಿ ಸಂಸದ ದಿ. ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಪ್ರಕರಣದ ತನಿಖೆ ಎಲ್ಲಿವರೆಗೆ ಬಂದಿದೆ ಎಂದು ಸ್ಯಾಂಡಲ್‍ವುಡ್ ನಟಿ ರಮ್ಯಾ ಟ್ವೀಟ್ ಮಾಡಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಕಳೆದ ಬಾರಿ ಡ್ರಗ್ಸ್‌ನ ಪ್ರಭಾವದಿಂದ ಜನರು ಮತ್ತು ಮಕ್ಕಳನ್ನು ಗಾಯಗೊಳಿಸಿದ್ದಕ್ಕಾಗಿ ನೀವು ಅವನನ್ನು ಬಿಟ್ಟುಬಿಟ್ಟಿದ್ದೀರಿ. ಈ ಬಾರಿಯೂ ಹಾಗೆಯೇ ಆಗಲಿದೆಯೇ? ಏನಾಯಿತ್ತು ಎಫ್‍ಐಆರ್? ಏನಾಯಿತು ಎಂಬುದು ವೀಡಿಯೋದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಅಥವಾ ಸರ್ಕಾರವು ಒತ್ತಡಕ್ಕೆ ಮಣಿಯುತ್ತದೆಯೇ ಎಂದು ನೋಡೋಣ ಎಂದು ಪ್ರಶ್ನೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

ಪಶುಸಂಗೋಪನಾ ಇಲಾಖೆಯು ನಾಯಿ ಮೇಲೆ ಕಾರು ಹತ್ತಿಸಿದ್ದ ವಿಚಾರವಾಗಿ ದೂರು ದಾಖಲಾಗಿದೆ ಅನ್ನೋದ್ರ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿತ್ತು. ಇದನ್ನ ಮರು ಟ್ವೀಟ್ ಮಾಡಿರುವ ರಮ್ಯಾ ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಅವರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ: ಎಚ್. ವಿಶ್ವನಾಥ್

RAMYA

ನಡೆದಿದ್ದೇನು?: ಉದ್ಯಮಿ, ಮಾಜಿ ಸಂಸದ ದಿ. ಆದಿಕೇಶವುಲು ನಾಯ್ಡು ಮೊಮ್ಮಗ ಆದಿ, ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆ ಜಯನಗರದಲ್ಲಿ ನಡೆದಿದೆ. ಆದಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿದ್ದಾನೆ. ಕಾರು ಹತ್ತಿದ ರಭಸಕ್ಕೆ ನಾಯಿ ವಿಲ-ವಿಲ ಒದ್ದಾಡಿದೆ. ಜಯನಗರ 1ನೇ ಬ್ಲಾಕ್ 10ನೇ ಬಿ ಮೈನ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‍ಐಆರ್ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಹೋದಾಗ ಆತ ಕಾರಿನೊಂದಿಗೆ ಪರಾರಿಯಾಗಿರುವ ವಿಚಾರ ತಿಳಿದು ಬಂದಿದೆ. ಪೊಲೀಸರು ವಿಚಾರಣೆಗೆ ಬರುವಂತೆ ಸಿದ್ದಾಪುರ ಪೊಲೀಸರು ಆದಿಗೆ ನೋಟಿಸ್ ಕೊಟ್ಟಿದ್ದಾರೆ. ಈ ಘಟನೆಯ ಬಳಿಕ ಆರೋಪಿಗೆ ಕೊರೊನಾ ಬಂದಿದೆ. ಕುಟುಂಬಸ್ಥರು ಆದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಕಾಪಿಯನ್ನು ಠಾಣೆಗೆ ಕಳುಹಿಸಿದ್ದಾರೆ. ಕೋವಿಡ್‍ನಿಂದ ಗುಣಮುಖವಾದ ನಂತ್ರ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *