ಅಮೆರಿಕದ ಆರೋಪ ಆಧಾರರಹಿತ: ಅದಾನಿ ಸಮೂಹ

ನವದೆಹಲಿ: ಅಮೆರಿಕ ನ್ಯಾಯಾಂಗ ಇಲಾಖೆ (US Department of Justice ) ಮತ್ತು ಅಮೆರಿಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಕಮಿಷನ್ ತನ್ನ ನಿರ್ದೇಶಕರ ವಿರುದ್ಧ ಮಾಡಿದ ಆರೋಪಗಳು ಆಧಾರರಹಿತ ಎಂದು ಅದಾನಿ ಸಮೂಹ (Adani Group) ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕ ನ್ಯಾಯಾಂಗ ಇಲಾಖೆ ಆರೋಪ ಪಟ್ಟಿಯಲ್ಲಿರುವ ಆರೋಪಗಳು ಸಾಬೀತಾಗುವವರೆಗೂ ಅವರನ್ನು ನಿರ್ದೋಷಿಗಳೆಂದು ಪರಿಗಣಿಸಲಾಗುವುದು ಹೇಳಿದೆ. ಈ ಪ್ರಕರಣಕ್ಕೆ ಸಾಧ್ಯವಿರುವ ಎಲ್ಲಾ ಕಾನೂನು ಹೋರಾಟ ಮಾಡಲಾಗುವುದು.


ಅದಾನಿ ಗ್ರೂಪ್ ಯಾವಾಗಲೂ ಕಾರ್ಯಾಚರಣೆಗಳ ಎಲ್ಲಾ ನ್ಯಾಯವ್ಯಾಪ್ತಿಯಲ್ಲಿ ಆಡಳಿತ, ಪಾರದರ್ಶಕತೆ ಮತ್ತು ನಿಯಂತ್ರಕ ಅನುಸರಣೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ದೃಢವಾಗಿ ಬದ್ಧವಾಗಿದೆ. ನಾವು ಕಾನೂನು-ಪಾಲಿಸುವ ಸಂಸ್ಥೆಯಾಗಿದ್ದು, ಎಲ್ಲಾ ಕಾನೂನುಗಳಿಗೆ ಸಂಪೂರ್ಣವಾಗಿ ಪಾಲಿಸುತ್ತೇವೆ ಎಂದು ನಾವು ನಮ್ಮ ಮಧ್ಯಸ್ಥಗಾರರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ನಾವು ಭರವಸೆ ನೀಡುತ್ತೇವೆ ಎಂದು ಅದಾನಿ ಸಮೂಹದ ಪರವಾಗಿ ವಕ್ತಾರರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಗುತ್ತಿಗೆ ಪಡೆಯಲು ಭಾರತದಲ್ಲಿ 2,200 ಕೋಟಿ ಲಂಚ – ಅದಾನಿ ವಿರುದ್ಧ ಅಮೆರಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್‌

ಅಮೆರಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿ (Adani Green Energy) 6,000 ಮಿಲಿಯನ್‌ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿತ್ತು. ಈ ಸಂದರ್ಭದಲ್ಲೇ ಅಮೆರಿಕದ ನ್ಯಾಯಾಂಗ ಇಲಾಖೆ ಲಂಚದ ಆರೋಪ ಮಾಡಿದೆ. ಈ ಬೆನ್ನಲ್ಲೇ ಅಮೆರಿಕನ್‌ ಡಾಲರ್‌ ಬಾಂಡ್‌ ಬಿಡುಗಡೆ ಮಾಡಿ ಹೂಡಿಕೆ ಆಕರ್ಷಿಸಲು ಮುಂದಾಗಿದ್ದ ಅದಾನಿ ಗ್ರೀನ್ ಎನರ್ಜಿ ಕಂಪನಿಯು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.