ಸ್ಮಾರಕ ಸಂಘರ್ಷ: ಇಂದು ಸಿಎಂಗೆ ಅನಿರುದ್ಧ್ ಮನವಿ ಪತ್ರ

– ವಿಷ್ಣು ಕುಟುಂಬಸ್ಥರ ಜೊತೆ ನಿರ್ಮಾಪಕರಿಂದ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಅಂಬಿ ಸಾವಿನ ಬಳಿಕ ವಿಷ್ಣು ಸ್ಮಾರಕದ ಚರ್ಚೆಯೆದ್ದಿದೆ. ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕೆಂದು ಭಾರತಿ ಪಟ್ಟುಹಿಡಿದಿದ್ದಾರೆ. ಆದ್ರೆ ಇದೆಲ್ಲದರ ನಡುವೆ ಇಂದು ಸಿಎಂಗೆ ಅನಿರುದ್ಧ್ ಪತ್ರ ಬರೆಯಲಿದ್ದಾರೆ. ಅತ್ತ ನಿರ್ಮಾಪಕ ಸಂಘ ಇಂದು ವಿಷ್ಣು ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಲಿದೆ.

ಕನ್ನಡ ಚಿತ್ರರಂಗದ ಮೂರು ಮಾಣಿಕ್ಯಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇತಿಹಾಸದ ಪುಟ ಸೇರಿದ್ದಾರೆ. ಈ ಮೂವರು ಕಲಾರತ್ನಗಳು ಬದುಕಿದ್ದಾಗ ಎಂದೂ ವಿವಾದವನ್ನ ಮೈಮೇಲೆ ಎಳೆದುಕೊಂಡವರಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅವರಂತೂ ವಿವಾದದಿಂದ ದೂರವೇ ಉಳಿದವರು. ವಿಷ್ಣು ಅಗಲಿ 10 ವರ್ಷಗಳಾಗಿದ್ದು, ಸ್ಮಾರಕ ನಿರ್ಮಾಣವಾಗಿಲ್ಲ. ರಾಜ್-ಅಂಬಿ ಅವರಂತೆ ವಿಷ್ಣು ಅವರ ಸ್ಮಾರಕವನ್ನೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಬೇಡ. ಅಭಿಮಾನ್ ಸ್ಟುಡಿಯೋ ಅಥವಾ ಮೈಸೂರಲ್ಲೇ ಮಾಡಿ. ಈ ಬಗ್ಗೆ ಡಿಸೆಂಬರ್ 30ರೊಳಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು ಅಂತ ಭಾರತಿ ವಿಷ್ಣುವರ್ಧನ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ವೇದಿಕೆಯಲ್ಲಿ ಮಾತನಾಡಿದ ಅನಿರುದ್ಧ್, ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಮನವಿ ಪತ್ರ ಕೊಡ್ತೀವಿ ಅಂದ್ರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಾಪಕ ಮುನಿರತ್ನ, ಇಂದು ಮಧ್ಯಾಹ್ನ 2 ಗಂಟೆಗೆ ವಿಷ್ಣು ಕುಟುಂಬಸ್ಥರನ್ನು ಭೇಟಿ ಮಾಡಿ ಚರ್ಚಿಸ್ತೇನೆ ಎಂದರು.

ವಿಷ್ಣುವರ್ಧನ್ ಅವರ ಸಮಾಧಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಮಾಡಲಾಗಿದೆ. ಇಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ, ಈ ಸ್ಟುಡಿಯೊ ಜಾಗ ಇದೀಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣದ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಇಂದು ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಕುಟುಂಬಸ್ಥರು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

https://www.youtube.com/watch?v=-hY6Ux0McaA

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *