ವಿನಯ್ ರೈ ಜೊತೆ ಪ್ರೀತಿಯಲ್ಲಿ ಬಿದ್ರಾ ಕನ್ನಡದ ‘ಆಪ್ತರಕ್ಷಕ’ ನಟಿ?

ವಿಷ್ಣುವರ್ಧನ್ ನಟನೆಯ ‘ಆಪ್ತರಕ್ಷಕ’ (Aptharakshaka) ಚಿತ್ರದಲ್ಲಿ ನಾಗವಲ್ಲಿ ಪಾತ್ರದಲ್ಲಿ ನಟಿಸಿದ್ದ ವಿಮಲಾ ರಾಮನ್ (Vimala Raman) ಇದೀಗ ಖಳನಟ ವಿನಯ್ ರೈ (Vinay Rai) ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಪ್ರೀತಿಯಲ್ಲಿ ಬಿದ್ರಾ? ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಚರ್ಚೆ ಶುರುವಾಗಿದೆ.

‘ಹನುಮಾನ್’ (Hanuman) ಚಿತ್ರದ ವಿಲನ್ ವಿನಯ್ ರೈ ಜೊತೆ ವಿಮಲಾ ಕ್ಲೋಸ್‌ ಆಗಿರುವ ಫೋಟೋಗಳು ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ಮತ್ತೆ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಈ ಜೋಡಿ ಸುದ್ದಿಯಲ್ಲಿದೆ. ಇದನ್ನೂ ಓದಿ:ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

40 ವರ್ಷ ಮೇಲ್ಪಟ್ಟಿರುವ ವಿನಯ್ ಮತ್ತು ವಿಮಲಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೂ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸದ್ಯಲ್ಲೇ ಈ ಜೋಡಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ ಎಂದು ಕಾದುನೋಡಬೇಕಿದೆ.

ವಿನಯ್ ರೈ ಅವರು ಮುಂಬೈನ ತುಳು ಕುಟುಂಬದಲ್ಲಿ ಜನಿಸಿದವರು. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಹನುಮಾನ್ ಚಿತ್ರದಲ್ಲಿ ತೇಜಾ ಸಜ್ಜಾಗೆ ಖಡಕ್ ವಿಲನ್ ಆಗಿ ನಟಿಸಿದ್ದರು.

ಆಪ್ತರಕ್ಷಕ, ರಾಜರಾಜೇಂದ್ರ ಚಿತ್ರದಲ್ಲಿ ವಿಮಲಾ ರಾಮನ್ ನಟಿಸಿದ್ದಾರೆ. ಸೌತ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂದಹಾಗೆ, ವಿನಯ್ ಮತ್ತು ವಿಮಲಾ ಜೋಡಿ `ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ದಂಪತಿಗಳಾಗಿ ನಟಿಸಿದ್ದರು.