ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ವಿಜಯಲಕ್ಷ್ಮಿ ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ ಎಂದು ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ವಿಜಯಲಕ್ಷ್ಮಿ, ಅಮ್ಮ ತೀರಿಹೋದ ತಕ್ಷಣ ಏನು ತೋಚಲಿಲ್ಲ, ಭಾಮಾ. ಹರೀಶ್ ನನಗೆ ಸಹಾಯ ಮಾಡಿದ್ದಾರೆ. ನನಗೆ ಅಳೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಸಡನ್ನಾಗಿ ನನ್ನ ಅಕೌಂಟ್ ಬಗ್ಗೆ ಅನುಮಾನ ಬಂದುಬಿಡ್ತು. ಕಲಾವಿದರು ಎಲ್ಲ ಒಂದೇ ಕುಟುಂಬ. ಶಿವಣ್ಣ, ಯಶ್ ಹತ್ರನೂ ಮಾತನಾಡಿದ್ದೀನಿ, ಜಗದೀಶ್ ಮಾತನಾಡಿದ್ದು ಸ್ವಲ್ಪ ತಪ್ಪಾಯ್ತು. ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ, ಎಲ್ಲದಕ್ಕೂ ನಾವು ಭಿಕ್ಷೆ ಬೇಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ

ಭಿಕ್ಷೆ ಅಂತ ಆದ್ರೂ ತಿಳಿದುಕೊಂಡು ಸಹಾಯ ಮಾಡಿ ಎಂದಿದ್ದ ವಿಜಯಲಕ್ಷ್ಮಿ ಅವರ ಮನವಿಗೆ ಸ್ಪಂದಿಸಿದ ಜನ 1 ರೂಪಾಯಿಯಿಂದ ಸಾವಿರದವರೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟು 6,92,350 ರೂಪಾಯಿ ಸಂದಾಯವಾಗಿದೆ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ತಾಯಿ ನಿಧನ

ವಿಜಯಲಕ್ಷ್ಮಿ ನೆರವಿಗೆ ಕನ್ನಡ ಚಿತ್ರರಂಗ ಬಂದಿಲ್ಲ ಎಂಬ ಲಾಯರ್ ಜಗದೀಶ್ ಹೇಳಿಕೆ ಹಿನ್ನಲೆ, ಲಾಯರ್ ಜಗದೀಶ್ ಬಗ್ಗೆ ನಿರ್ಮಾಪಕ ಸುರೇಶ್ ಕೆಂಡಾಮಂಡಲವಾಗಿದ್ದಾರೆ. ಚಿತ್ರರಂಗದ ಬಗ್ಗೆ ಮಾತಾಡೋಕೆ ಈ ಜಗದೀಶ್ ಯಾರು? ನಿಮ್ಮ ಕೇಸ್ ಮಾಡ್ಕೊಂಡು ಸುಮ್ಮನೆ ಇರಿ. ಸಿನಿಮಾ ಇಂಡಸ್ಟ್ರಿಯ ಮಾತಾಡೋ ಹಕ್ಕು ನಿಮಗಿಲ್ಲ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಹುಷಾರ್. ಚಿತ್ರರಂಗ ಹೇಗೆ ಬೆಳೆದು ಬಂದಿದೆ ಅಂತ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

Leave a Reply