ರಜನಿಕಾಂತ್‌ಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

ಕಾಲಿವುಡ್ ನಟ ಶರತ್ ಕುಮಾರ್ (Sarathkumar) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಜನಿಕಾಂತ್ (Rajanikanth) ಮನೆಗೆ ಭೇಟಿ ನೀಡಿ ಮದುವೆ (Wedding) ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ಕುರಿತು ನಟಿ ವರಲಕ್ಷ್ಮಿ (Varalaxmi) ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಮ್ಮ ತಲೈವರ್ ರಜಿನಿಕಾಂತ್ ಸರ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮತ್ತು ಲತಾ ಆಂಟಿ ಅವರನ್ನು ಮದುವೆ ಆಹ್ವಾನಿಸಿದೆ. ಧನ್ಯವಾದಗಳು ಸರ್ ಎಂದು ವರಲಕ್ಷ್ಮಿ ಬರೆದುಕೊಂಡಿದ್ದಾರೆ. ಭೇಟಿಯಾಗಿರುವ ಫೋಟೋ ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿದ್ರು- ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಸಮರ್ಥನೆ

ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಎಂಗೇಜ್‌ಮೆಂಟ್ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ಮದುವೆಗೆ ಸಿದ್ಧತೆ ನಡೆಯುತ್ತಿದೆ.

ಇನ್ನೂ `ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.