ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬ ಆಚರಿಸಿದ ‘ಅನಿಮಲ್‌’ ನಟಿ

‘ಅನಿಮಲ್’ (Animal) ಸಿನಿಮಾದ ಸಕ್ಸಸ್ ಬಳಿಕ ತೃಪ್ತಿ ದಿಮ್ರಿಗೆ ಬಾಲಿವುಡ್, ತೆಲುಗು ಚಿತ್ರರಂಗದಿಂದ ಬೇಡಿಕೆ ಜಾಸ್ತಿಯಾಗಿದೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಬಾಯ್‌ಫ್ರೆಂಡ್ ಜೊತೆ ಹೋಳಿ ಸೆಲೆಬ್ರೇಟ್ ಮಾಡಿದ್ದಾರೆ. ಹೋಳಿ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಮುಂಬೈನಲ್ಲಿ ಬಾಯ್‌ಫ್ರೆಂಡ್ ಜೊತೆ ಬಣ್ಣದಲ್ಲಿ ಆಟ ಆಡಿ ಹಬ್ಬ ಮಾಡಿ ಖುಷಿಪಟ್ಟಿದ್ದಾರೆ. ಪಡ್ಡೆಹುಡುಗರ ನೆಚ್ಚಿನ ನಟಿ ತೃಪ್ತಿ ದಿಮ್ರಿ ಹೋಳಿ ಸೆಲೆಬ್ರೇಶನ್‌ ಫೋಟೋಗಳನ್ನು ಫ್ಯಾನ್ಸ್‌ ದಂಗಾಗಿದ್ದಾರೆ. ಗಂಡ್‌ ಹೈಕ್ಳ ಕ್ರಶ್‌ ತೃಪ್ತಿ ಎಂಗೇಜ್‌ ಆದ್ರಾ? ಮ್ಯಾಟರ್‌ ಎಂದು ಅಧಿಕೃತ ಮಾಹಿತಿ ಸಿಗದೇ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಚಿತ್ರದ ಶೂಟಿಂಗ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ‘ದಿಯಾ’ ಹೀರೋ

ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಜೊತೆ ಬ್ರೇಕಪ್ ಆದ್ಮೇಲೆ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಎಂಗೇಜ್ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆಗಾಗ ಸ್ಯಾಮ್ ಜೊತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಸದ್ಯ ಹೋಳಿ ಫೋಟೋಸ್ ಗಾಸಿಪ್ ಮಂದಿಯ ಬಾಯಿಗೆ ಆಹಾರವಾಗಿದೆ.

ಸದ್ಯ ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದ ಮೂಲಕ ತೃಪ್ತಿ ದಿಮ್ರಿ ಗಮನ ಸೆಳೆಯುತ್ತಿದ್ದಾರೆ. ವಿಕ್ಕಿ ಕೌಶಲ್- ಆ್ಯಮಿ ಜೊತೆ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಜುಲೈ 20ಕ್ಕೆ ರಿಲೀಸ್ ಆಗುತ್ತಿದೆ.