ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟರ ಜೊತೆ ಕೆಲ ನಿಮಿಷದ ಕಾಲ ಮಿಂಚಿ ಹೋಗುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಈಗ ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಗ್ಗೆ ಕಮೆಂಟ್ ಮಾಡಿದ್ದಾರೆ.
ತಮನ್ನಾ ಕನ್ನಡದ ವಿಶೇಷ ಹಾಡಿಗೆ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮನ್ನಾ ಕನ್ನಡದ ಸಿನಿಮಾಗಳಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸಬೇಕೆಂದು ಕರ್ನಾಟಕದ ಅಭಿಮಾನಿಗಳು ಇಚ್ಛಿಸುತ್ತಿದ್ದಾರೆ. ಸದ್ಯ ಕನ್ನಡಿಗರ ಆಸೆಯನ್ನು ತಮನ್ನಾ ಈಡೇರಿಸಲಿದ್ದಾರೆ. ನಾನು ಖಂಡಿತವಾಗಿಯೂ ಕನ್ನಡ ಚಿತ್ರಗಳಲ್ಲಿ ನಟಿಸುವೆ. ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದೇನೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ನಾನು ಖಂಡಿತವಾಗಿ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಯಶ್ ಹಾಗೂ ಕೆಜಿಎಫ್ ಚಿತ್ರತಂಡ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ನೀಡಿದೆ. ಚಿತ್ರತಂಡದಲ್ಲಿ ಎಲ್ಲರೂ ನನ್ನನ್ನು ಆತ್ಮೀಯವಾಗಿ ನೋಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನನಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿ ನನಗೆ ಖುಷಿಯಾಗುತ್ತಿದೆ. ಸ್ಯಾಂಡಲ್‍ವುಡ್ ನನ್ನನ್ನು ಸ್ವಾಗತಿಸುತ್ತಿರುವುದನ್ನು ನೋಡಿದರೆ ನಾನು ಕನ್ನಡದಲ್ಲಿ ನಟಿಸಬೇಕೆಂದು ಎನಿಸುತ್ತದೆ ಎಂದು ತಮನ್ನಾ ತಿಳಿಸಿದ್ದಾರೆ.

ತಮನ್ನಾ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಕನ್ನಡದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪುನೀತ್ ಜೊತೆ ಜಾಹೀರಾತಿನಲ್ಲಿ ನಟಿಸಿದ ತಮನ್ನಾ, ಅವರ ಜೊತೆ ಸಿನಿಮಾದಲ್ಲೂ ನಟಿಸುವುದಾಗಿ ತಿಳಿಸಿದ್ದಾರೆ. ಪುನೀತ್ ಅವರ ಜೊತೆ ಸ್ಕ್ರಿಪ್ಟ್ ಸಿಕ್ಕರೆ ನಾನು ಪಕ್ಕಾ ಒಪ್ಪಿಕೊಳ್ಳುತ್ತೇನೆ ಎಂದು ತಮನ್ನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply