ಸೀಕ್ರೆಟ್ ಆಗಿ ಮದುವೆಯಾದ ನಟಿ ತಾಪ್ಸಿ ಪನ್ನು

ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು (Taapsee Pannu) ಸದ್ದಿಲ್ಲದೇ ಸೀಕ್ರೆಟ್ ಆಗಿ ಮದುವೆಯಾಗಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆಗೆ (Wedding) ಹಾಜರಿ ಹಾಕಿದ್ದವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಕೆಲದಿನಗಳಿಂದ ನಟಿಯ ಮದುವೆಯ ಬಗ್ಗೆ ಸುದ್ದಿ ವೈರಲ್ ಆಗಿತ್ತು. ಆದರೆ ತಾಪ್ಸಿ (Tapsee Pannu) ಈ ಬಗ್ಗೆ ಯಾವುದೇ ರಿಯಾಕ್ಷನ್ ಕೊಡದೇ ಮೌನ ವಹಿಸಿದ್ದರು. ಇದೀಗ ನಟಿ ಉದಯ್‌ಪುರದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಬೊಂಬೆ ಹೇಳುತೈತೆ’ ಸಾಂಗ್ ಕೇಳುತ್ತಿದ್ದಂತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಣ್ಣೀರು

ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ನಟಿಯ ಮದುವೆಯ ಫೋಟೋ ಎಲ್ಲಿಯೂ ರಿವೀಲ್ ಆಗಿಲ್ಲ. ಮದುವೆ ಬಗ್ಗೆ ನಟಿ ಅಧಿಕೃತ ಮಾಹಿತಿ ನೀಡುವವರೆಗೂ ಕಾಯಬೇಕಿದೆ.

10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.