ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ನಟಿ ಶೃತಿ ಹರಿಹರನ್ ಅವರು ಸುಮಾರು 5 ಪುಟಗಳಲ್ಲಿ ದೂರನ್ನು ನೀಡಿದ್ದಾರೆ. ಶೃತಿ ಹರಿಹರನ್ ದೂರು ನೀಡಿದ ಹಿನ್ನೆಲೆಯಲ್ಲಿ ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್ 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) 354(ಅತ್ಯಾಚಾರ ಉದ್ದೇಶದಿಂದ ಹಲ್ಲೆ), 354ಎ(ಲೈಂಗಿಕವಾಗಿ ಸಹಕರಿಸಲು ಒತ್ತಾಯ) ಅಡಿ ಎಫ್‍ಐಆರ್ ದಾಖಲಾಗಿದೆ.

ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅನ್ಯಾಯವಾದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಯುಬಿ ಸಿಟಿಗೆ ಚಿತ್ರದ ಬಗ್ಗೆ ಮಾತನಾಡಲು ಕರೆದಿದ್ದು, ಊಟಕ್ಕೆ ಕರೆದುಕೊಂಡು ಹೋಗಿದ್ದರು. ಯುಬಿ ಸಿಟಿಯ ಪಬ್‍ವೊಂದರಲ್ಲಿ ಊಟ ಮಾಡಿದ್ದೆವು. ಈ ವೇಳೆ ನನ್ನ ದೇಹ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದರು. ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು. ಲೈಂಗಿಕ ತೃಷೆಗಾಗಿ ರೆಸಾರ್ಟ್ ಗೆ ಕರೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?
ನವೆಂಬರ್ 2015ರ ಚಿತ್ರೀಕರಣ ವೇಳೆ ನಡೆದಿದ್ದ ಘಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಳಗ್ಗೆ 7.30- ಸಂಜೆ 6.30ರವರೆಗೆ ಶೂಟಿಂಗ್ ಇತ್ತು. ಸ್ಕ್ರಿಪ್ಟ್ ನಲ್ಲಿ ರೋಮ್ಯಾಂಟಿಕ್ ಸೀನ್ ಇತ್ತು. ಒಂದು ದೃಶ್ಯದಲ್ಲಿ ಇಬ್ಬರು ತಬ್ಬಿಕೊಳ್ಳಬೇಕಾಗಿತ್ತು. ಸೀನ್ ಆದ ಮೇಲೆ ನಿರ್ದೇಶಕರು ರಿಹರ್ಸಲ್ ಮಾಡಿದ್ದರು. ಈ ವೇಳೆ ಅರ್ಜುನ್ ಸರ್ಜಾ ಅಸಹ್ಯವಾಗಿ ನನ್ನನ್ನು ನೋಡಿದ್ದರು. ಆಗ ಅರ್ಜುನ್ ಸರ್ಜಾ ಹಿಂಭಾಗದಿಂದ ನನ್ನನ್ನು ಅಪ್ಪಿಕೊಂಡರು. ಇದಕ್ಕೆ ನಾನು ವಿರೋಧಿಸಿದೆ. ಆಗ ನನ್ನ ತೊಡೆ ಹಾಗೂ ಎದೆ ಭಾಗವನ್ನು ಸ್ಪರ್ಶಿಸಿ ತೀವ್ರ ಮುಜುಗರವನ್ನು ಉಂಟು ಮಾಡಿದ್ದರು. ಶೂಟಿಂಗ್ ಆದಾ ಕಾರಣ ನಾನು ಇದನ್ನೆಲ್ಲ ತಡೆದುಕೊಂಡೆ. ನಾನು ಇದಕ್ಕೆ ಪ್ರತಿಕ್ರಿಯಿಸುವ ಮೊದಲೇ ಅವರು ನನನ್ನು ಗಟ್ಟಿಯಾಗಿ ಅಪ್ಪಿಕೊಂಡರು. ನನ್ನನ್ನು ತಬ್ಬಿಕೊಂಡು ನನ್ನ ಬೆನ್ನ ಮೇಲೆ ಸವರುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೆ ಅಲ್ಲದೇ ಅರ್ಜುನ್ ಸರ್ಜಾ ನಿರ್ದೇಶಕರಿಗೆ ಈ ದೃಶ್ಯವನ್ನು ಇನ್ನು ಚೆನ್ನಾಗಿ ಮಾಡಬಹುದೇ ಎಂದು ಕೇಳಿದರು. ಬಳಿಕ ನಾನು ನಿರ್ದೇಶಕರ ಬಳಿ ಹೋಗಿ ಹೀಗೆಲ್ಲಾ ಆದರೆ ನನಗೆ ಕೆಲಸ ಮಾಡಲು ಆಗುವುದಿಲ್ಲ ಎಂದಿದ್ದೆ. ಅರ್ಜುನ್ ಸರ್ಜಾರ ಈ ವರ್ತನೆಯಿಂದ ನನಗೆ ಮುಜುಗರ ಉಂಟಾಗಿ ಕಾರವಾನ್(ಸಿನಿಮಾ ಸೆಟ್ ನಲ್ಲಿ ಮೇಕಪ್ ಮಾಡುವ ವಾಹನ) ನಲ್ಲಿ ಅಳುತ್ತ ಕುಳಿತುಕೊಂಡೆ. ಸಿನಿಮಾದ ರೋಮ್ಯಾಂಟಿಕ್ ದೃಶ್ಯವನ್ನು ಬಳಸಿಕೊಂಡು ನನ್ನ ಕೈ ಹಿಡಿದುಕೊಂಡು ಎಳೆದಾಡಿದ್ದರು.

ಇನ್ನೊಂದು ದೃಶ್ಯದಲ್ಲಿ ನಾನು ಹಾಸಿಗೆ ಮೇಲೆ ಮಲಗಿರಬೇಕಿತ್ತು. ಈ ದೃಶ್ಯವನ್ನು ದುರುಪಯೋಗಪಡಿಸಿಕೊಂಡು ಕೈ ಎಳೆದು ತಬ್ಬಿಕೊಂಡರು. ಅತ್ಯಂತ ಹತ್ತಿರವಾಗಿ ಬರಲು ನನ್ನನ್ನು ಎಳೆದುಕೊಂಡರು. ಅವರನ್ನು ತಳ್ಳಿ ನಾನು ಹೊರಗೆ ಬಂದೆ. ಹೆಣ್ಣಿನ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಂಡಿದ್ದರು. ಈ ವೇಳೆ ನಾನು ಕಿರುಚಿದೆ. ತುಂಬಾ ಅಳುತ್ತಾ ಕುಳಿತುಕೊಡಿದ್ದೆ. ಇದರಿಂದ ನನಗೆ ಬೇಸರ ಉಂಟಾಗಿ ಸಹ ನಿರ್ದೇಶಕ ಭರತ್ ನೀಲಕಂಠರ ಗಮನಕ್ಕೆ ತಂದಿದ್ದೆ. ಆಗ ಅವರು ರಿಹರ್ಸಲ್ ಬೇಡ ನೇರವಾಗಿ ಶೂಟಿಂಗ್ ಮಾಡುತ್ತೇನೆ ಎಂದು ಅವರು ತಿಳಿಸಿದ್ದರು.

ದೇವನಹಳ್ಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ಇತ್ತು. ನನ್ನ ಜೊತೆ ಕೆಟ್ಟದಾಗಿ ಅರ್ಜುನ್ ಸರ್ಜಾ ನಡೆದುಕೊಂಡಿದ್ದರು. ಶೂಟಿಂಗ್ ಸಂದರ್ಭದಲ್ಲಿ ನನ್ನ ಪ್ರೈವೆಟ್ ರೆಸಾರ್ಟ್ ಇದೆ ಅಲ್ಲಿಗೆ ಬಾ ಎಂದು ಕರೆದಿದ್ದರು. ನಾನು ಏನಕ್ಕೆ ಎಂದು ಕೇಳಿದೆ. ಆಗ ಅವರು ನಾನು ಇಂದು ಫುಲ್ ಫ್ರೀ ಇದ್ದು ನನ್ನೊಂದಿಗೆ ಸಮಯ ಕಳೆ ಯಬೇಕು ಎಂದಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=b2f6FV1rIIk

Leave a Reply