#MeToo ಬಗ್ಗೆ ನಟಿ ಶುಭಾ ಪೂಂಜಾ ಪ್ರತಿಕ್ರಿಯೆ

ಬೆಂಗಳೂರು: ನಾನು ಕನ್ನಡ ಚಿತ್ರರಂಗದಲ್ಲಿ ಸುಮಾರು 12 ವರ್ಷಗಳಿಂದ ಇದ್ದೀನಿ. ಇದೊಂದು ತುಂಬಾ ಒಳ್ಳೆಯ ಚಿತ್ರರಂಗವಾಗಿದೆ. ಫ್ಯಾಮಿಲಿ ಎಂಟರ್‍ಟೈನ್ ಮೆಂಟ್ ಇರೋ ಒಂದು ಚಿತ್ರರಂಗ ಇದಾಗಿದೆ ಅಂತ ನಟಿ ಶುಭಾ ಪೂಂಜಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಟೂ ಒಂದು ಸೂಕ್ಷ್ಮ ವಿಚಾರವಾಗಿದೆ. ಈ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲು ಇಷ್ಟ ಪಡುವುದಿಲ್ಲ. ಬೇರೆ ಚಿತ್ರರಂಗಗಳಿಗೆ ಹೋಲಿಸಿದ್ರೆ ನಮ್ಮ ಸ್ಯಾಂಡಲ್ ವುಡ್ ಬಹಳ ಚೆನ್ನಾಗಿದೆ. ಹೊಸಬರಿಗೆ ಇಲ್ಲಿ ರಕ್ಷಣೆ ಇದೆ ಅಂದ್ರು.

ಶೃತಿ ಹತಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ವಿಚಾರ ವೈಯುಕ್ತಿಕವಾಗಿದ್ದು, ನಮ್ಮ ಚಲನ ಚಿತ್ರ ವಾಣಿಜ್ಯ ಮಂಡಳಿ ಈ ಸಮಸ್ಯೆಯನ್ನು ಬಗೆಹರಿಸಲಿದೆ. ಯಾರಿಗೆ ದೌರ್ಜನ್ಯವಾದ್ರು ಫಿಲಂ ಚೇಂಬರ್ ನಲ್ಲಿ ಕಂಪ್ಲೇಟ್ ಮಾಡಬಹುದು. ನನ್ನ 12 ವರ್ಷದ ವೃತ್ತಿ ಬದುಕಿನಲ್ಲಿ ನನಗೆ ಈ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ. ಈ ಚಿತ್ರರಂಗದಲ್ಲಿ ತುಂಬಾ ಒಳ್ಳೆಯವರಿದ್ದಾರೆ. ಇಲ್ಲಿ ಮಹಿಳೆಯರಿಗೆ ತುಂಬಾನೆ ಗೌರವ ಹಾಗೂ ಬೇಕಾದ ಸೌಲಭ್ಯಗಳನ್ನು ಕೊಡುತ್ತಾರೆ. ಒಟ್ಟಿನಲ್ಲಿ ಈಗಾಗಿರೋ ಸಮಸ್ಯೆ ಒಳ್ಳೆಯ ರೀತಿಯಲ್ಲಿ ಬಗೆಹರಿಯಲಿ. ಕನ್ನಡ ಚಿತ್ರರಂಗ ಯಾವತ್ತೂ ನಗು ನಗುತ್ತಾ ಇರಲಿ ಅಂತ ಆಶಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *