ನಾಯಿ ಕಳೆದುಕೊಂಡ ದುಃಖದಲ್ಲಿ ಮೊಗ್ಗಿನ ಮನಸು ಬೆಡಗಿ

ಬೆಂಗಳೂರು: ಬಹುತೇಕರಿಗೆ ಪೆಟ್ ಡಾಗ್ ಎಂದರೆ ಎಲ್ಲಿಲ್ಲದ ಪ್ರೀತಿ, ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿರುತ್ತಾರೆ. ಅವುಗಳ ಜೊತೆ ಯಾವಾಗಲೂ ಕಾಲ ಕಳೆಯುತ್ತಿರುತ್ತಾರೆ. ಈ ಮೂಲಕ ಕೆಲಸದ ದಣಿವನ್ನು ನೀಗಿಸಿಕೊಳ್ಳುತ್ತಿರುತ್ತಾರೆ. ಹೀಗೆ ಸಾಕು ಪ್ರಾಣಿಗಳು ಅವರ ಜೀವನದ ಭಾಗವೇ ಆಗಿರುತ್ತವೆ. ಅದೇ ರೀತಿ ನಟಿ ಶುಭ ಪೂಂಜಾ ಸಹ ನಾಯಿಯನ್ನು ಸಾಕಿದ್ದರು. ಆದರೆ ಅದು ಈಗ ಸಾವನ್ನಪ್ಪಿದೆ. ನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಶುಭ ಪೂಂಜ ಕೊರಗುತ್ತಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಇರುವ ಶುಭ ಪೂಂಜಾ ತಮ್ಮ ಪ್ರೀತಿಯ ನಾಯಿಯೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಇದೇ ಸಮಯದಲ್ಲಿ ನಾಯಿ ಸಾವನ್ನಪ್ಪಿರುವುದು ಶುಭ ಅವರಿಗೆ ತೀವ್ರ ಬೇಸರವನ್ನುಂಟುಮಾಡಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ನಟಿ ಐಂದ್ರಿತಾ ರೇ ಕಮೆಂಟ್ ಮಾಡಿ ಸಮಾಧಾನ ಹೇಳಿದ್ದು, ಹೋ ಡಿಯರ್ ಟೇಕ್ ಕೇರ್ ಶುಭ, ನಮ್ಮ ಜೀವನದಲ್ಲಿ ಇದು ಬಹುದೊಡ್ಡ ನಷ್ಟ. ನಿನಗಾಗಿರುವ ನಷ್ಟ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿದೆ. ಟೇಕ್ ಕೇರ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಜಲವು ನಟ, ನಟಿಯರು ಸಹ ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್‍ಡೌನ್ ವೇಳೆ ಮನೆಯಲ್ಲಿರದೆ ಶುಭ ಪೂಂಜಾ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಆಹಾರದ ಕಿಟ್ ನೀಡುತ್ತಿದ್ದಾರೆ. ತಮ್ಮದೇ ಟೀಮ್ ಕಟ್ಟಿಕೊಂಡು ಉಡುಪಿಯ ಕಾಪು ಸುತ್ತಲಿನ ಪ್ರದೇಶಗಳಲ್ಲಿನ ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ನೀಡುತ್ತಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ನೋವು ತೋಡಿಕೊಂಡಿರುವ ಶುಭ ಪೂಂಜಾ, ನನ್ನ ಜಗತ್ತನ್ನು ಕಳೆದುಕೊಂಡಿದ್ದೇನೆ. ನನಗೆ ಇವನೇ ಒಂದು ಜಗತ್ತು ಆಗಿದ್ದ. ಸ್ನೇಹಿತರೆ ನಿಮಗೆ ಗೊತ್ತಾ, ಇವನು ಇನ್ನಿಲ್ಲ. ಆದರೆ ಇವನು ಯಾವಾಗಲೂ, ಪ್ರತಿ ಸೆಕೆಂಡ್ ನನ್ನ ಜೊತೆಗೆ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದುಃಖ ತೋಡಿಕೊಂಡಿದ್ದಾರೆ.

ನಟಿ ಶುಭ ಪೂಂಜಾಗೆ ಇತ್ತೀಚೆಗೆ ಹೆಚ್ಚು ಆಫರ್ ಬರುತ್ತಿದ್ದು, ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನರಗುಂದ ಬಂಡಾಯ ಸಿನಿಮಾ ಬಿಡುಗಡೆಯಾಗಿ ಜನಪ್ರಿಯತೆ ಗಳಿಸುತ್ತಿದ್ದಂತೆ, ಇದೀಗ ತ್ರಿದೇವಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದ್ದು, ಈ ಚಿತ್ರ ಕನ್ನಡ ಹಾಗೂ ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ. ಶುಭ ಪುಂಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *