ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

ಚೆನ್ನೈ: ಬಹುಭಾಷಾ ನಟಿ ಶೃತಿ ಹಾಸನ್ ಆಹಾರ ಮತ್ತು ಸೆಕ್ಸ್ ಪ್ರಶ್ನೆಗೆ ಸಖತ್ ಬೋಲ್ಡ್ ಆಗಿ ಉತ್ತರಿಸಿದ್ದು, ಈ ಮೂಲಕ ಸುದ್ದಿಯಾಗಿದ್ದಾರೆ.

ಶೃತಿ ಹಾಸನ್ ರಿಲೇಷನ್‍ಶಿಪ್ ಮತ್ತು ನೇರ ಹೇಳಿಕೆಗಳಿಗೆ ಯಾವಾಗಲೂ ಸುದ್ದಿಯಾಗುತ್ತಾ ಇರುತ್ತಾರೆ. ಈಗ ಮತ್ತೊಮ್ಮೆ ಖಾಸಗಿ ಶೋವೊಂದರಲ್ಲಿ ನೀವು ಆಹಾರ ಮತ್ತು ಸೆಕ್ಸ್‍ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಕೇಳಲಾಗಿದೆ. ಈ ವೇಳೆ ಶೃತಿ, ಆಹಾರ, ಸೆಕ್ಸ್ ಗೂ ಸಂಬಂಧವಿಲ್ಲ. ನಾವು ಸೆಕ್ಸ್ ಇಲ್ಲದೆ ಇರಬಹುದು. ಆದರೆ ಆಹಾರವಿಲ್ಲದೇ ಇರಲು ಸಾಧ್ಯವಿಲ್ಲ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:  ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್​ಗಳಿಂದ ಕರೆ

ತಮ್ಮ ಬೋಲ್ಡ್ ಉತ್ತರದ ಮೂಲಕ ಮತ್ತೆ ವೀಕ್ಷಕರ ಗಮನ ಸೆಳೆದಿರುವ ಈ ನಟಿ ಕಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್ ನಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಪ್ರಸ್ತುತ ‘ಲಾಭಂ’ ಮತ್ತು ‘ಸಲಾರ್’ ಸಿನಿಮಾದಲ್ಲಿ ಬ್ಯುಸಿಯಾಗಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಸಿನಿಮಾ ಬಗ್ಗೆ ಮಾತ್ರವಲ್ಲ, ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆಯು ಅಪ್ಡೇಟ್ ಕೊಡುತ್ತಿರುತ್ತಾರೆ. ಇದನ್ನೂ ಓದಿ:  ಪರೀಕ್ಷಾ ಕೇಂದ್ರದಲ್ಲೇ ವಿದ್ಯಾರ್ಥಿನಿಗೆ ಕೀ ಆನ್ಸರ್- 8 ಜನರು ಅರೆಸ್ಟ್

ಶೃತಿ ಅವರ ‘ಸಲಾರ್’ ಚಿತ್ರದ ಮತ್ತೊಂದು ವಿಶೇಷವೆಂದರೆ ಇದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧವಾಗುತ್ತಿದ್ದು, ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಶೃತಿ ‘ಅನಗನಗಾ ಓ ಧೀರುಡು’, ‘ಓ ಮೈ ಫ್ರೆಂಡ್, ‘ಗಬ್ಬರ್ ಸಿಂಗ್’, ‘ಪುಲಿ’, ‘ಪ್ರೇಮಂ’, ‘ಯಾರಾ’, ‘ಕ್ರ್ಯಾಕ್’, ‘ದಿ ಪವರ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:  ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ

Comments

Leave a Reply

Your email address will not be published. Required fields are marked *