ಮದುವೆ ಬಗ್ಗೆ ಮೌನ ಮುರಿದ ಶ್ರದ್ಧಾ ಕಪೂರ್

‘ಆಶಿಕಿ 2′ ಬೆಡಗಿ ಶ್ರದ್ಧಾ ಕಪೂರ್ (Sharddha Kapoor)  ‘ಸ್ತ್ರಿ -2’ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್‌ಗೆ (Rajkumar Rao) ನಾಯಕಿಯಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಮದುವೆ (Wedding) ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಇನ್ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟ್ ಹಂಚಿಕೊಂಡ ನಟಿ ನತಾಶಾ

ಯಶಸ್ಸಿಗಾಗಿ ಎದುರು ನೋಡ್ತಿರುವ ಶ್ರದ್ಧಾ ಕಪೂರ್ ಸದ್ಯ ಸ್ತ್ರಿ ಪಾರ್ಟ್‌ 2 ಸಿನಿಮಾದ ಪ್ರಮೋಷನ್‌ನಲ್ಲಿ ನಿರತರಾಗಿದ್ದಾರೆ. ಪ್ರಚಾರದ ವೇಳೆ, ಮದುವೆ ಕುರಿತು ಎದುರಾದ ಪ್ರಶ್ನೆಗೆ ಜಾಣತನದಿಂದ ಶ್ರದ್ಧಾ ಉತ್ತರಿಸಿದ್ದಾರೆ. ಆಕೆ ಸ್ತ್ರಿ, ಆಕೆಗೆ ಇಷ್ಟ ಬಂದಾಗ ಮದುಮಗಳು ಆಗುತ್ತಾಳೆ ಎಂದು ನಟಿ ಉತ್ತರಿಸಿದ್ದಾರೆ.

ಇನ್ನೂ ಶ್ರದ್ಧಾ ಹೆಸರು ಪ್ರಸ್ತುತ ರಾಹುಲ್‌ ಮೋದಿ (Rahul Mody) ಜೊತೆ ಕೇಳಿ ಬರುತ್ತಿದೆ. ಇಬ್ಬರ ಕುರಿತು ಡೇಟಿಂಗ್‌ ಸುದ್ದಿ ಹಬ್ಬಿದೆ. ಅದಕ್ಕೆ ಪೂರಕವೆಂಬಂತೆ, ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ, 2018ರಲ್ಲಿ ‘ಸ್ತ್ರಿ’ ಮೊದಲ ಭಾಗ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಈಗ ‘ಸ್ತ್ರಿ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಶ್ರದ್ಧಾ ಕೆರಿಯರ್‌ಗೆ ಗೆಲುವು ತಂದು ಕೊಡುತ್ತಾ ಕಾಯಬೇಕಿದೆ.