ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪ್ರೇಮ್ ಕಹಾನಿ’ ಖ್ಯಾತಿಯ ನಟಿ

ಚೆನ್ನೈ: ಸ್ಯಾಂಡಲ್‍ವುಡ್ ನಟ ಅಜಯ್ ರಾವ್ ಅಭಿನಯದ ‘ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ ಶೀಲಾ ಕೌರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚೆನ್ನೈನಲ್ಲಿ ಮಾರ್ಚ್ 11ರಂದು ಬುಧವಾರ ಬಹುಭಾಷಾ ನಟಿ ಶೀಲಾ ಕೌರ್ ಉದ್ಯಮಿ ಸಂತೋಷ್ ರೆಡ್ಡಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಶೀಲಾ ತಮ್ಮ ಮದುವೆಯ ಬಗ್ಗೆ ಯಾರಿಗೂ ಅಷ್ಟೇನು ಮಾಹಿತಿ ನೀಡಲಿಲ್ಲ. ಹೀಗಾಗಿ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ತಾವು ಮದುವೆಯಾಗಿರುವ ವಿಚಾರವನ್ನು ನಟಿ ಶೀಲಾ ಕೌನ್ ಫೇಸ್‍ಬುಕ್‍ನಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ನಮಗೆ ಈ ದಿನ ವಿಶೇಷವಾಗಿದೆ. ಇನ್ಮುಂದೆ ನಾವು ಒಟ್ಟಿಗೆ ಹೊಸ ಜೀವನವನ್ನು ಶುರು ಮಾಡುತ್ತಿದ್ದೇವೆ. ನಿಜಕ್ಕೂ ತುಂಬಾ ಖುಷಿಯಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ. ನಟಿ ಫೋಟೋ ಅಪ್ಲೋಡ್ ಮಾಡಿ ಮದುವೆಯಾಗಿರುವ ಬಗ್ಗೆ ತಿಳಿಸಿದ ತಕ್ಷಣ, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವೈರಲ್ ಆಗಿದೆ. ಇದೀಗ ನೆಟ್ಟಿಗರು ನವಜೋಡಿಗೆ ಕಮೆಂಟ್ ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಿದ್ದಾರೆ.

ಶೀಲಾ ಕೌರ್ ಬಾಲನಟಿಯಾಗಿ ತಮಿಳು ಸಿನಿಮಾರಂಗವನ್ನು ಪ್ರವೇಶ ಮಾಡಿದ್ದರು. ಬಾಲನಟಿಯಾಗಿಯೇ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ 2006ರಲ್ಲಿ ತೆಲುಗಿನ ‘ಸೀತಕೋಕ ಚಿಲುಕ’ ಸಿನಿಮಾದ ಮೂಲಕ ನಟಿಯಾಗಿ ಅಭಿನಯಿಸಿದ್ದಾರೆ. ರಾಜು ಭಾಯ್, ಮಸ್ಕಾ, ಅದುರ್ಸ್, ಪರುಗು ಸಿನಿಮಾದಲ್ಲಿಯೂ ಶೀಲಾ ನಟಿಸಿದ್ದರು.

ನಟಿ ಶೀಲಾ ಕನ್ನಡದಲ್ಲೂ ಅಭಿನಯಿಸಿದ್ದು, ನಟ ಅಜಯ್ ರಾವ್ ಅಭಿನಯದ ‘ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅರ್ಜುನ್ ಆರ್ಯ ಅವರ ‘ಹೈಪರ್’ ಸಿನಿಮಾದಲ್ಲಿ ಶೀಲಾ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರಾದ ಎನ್‍ಟಿಆರ್, ಅಲ್ಲು ಅರ್ಜುನ್, ರಾಮ್, ಬಾಲಕೃಷ್ಣ ಜೊತೆ ಶೀಲಾ ತೆರೆಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲೂ ಅಭಿನಯಿಸಿದ್ದಾರೆ.

https://www.facebook.com/SheelaActress/posts/3562112623863709

Comments

Leave a Reply

Your email address will not be published. Required fields are marked *