ನಟಿ ರಮ್ಯಾ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡಬೇಕು : ನಟಿ ಶರ್ಮಿಳಾ ಮಾಂಡ್ರೆ

ಮೋಹಕ ತಾರೆ ರಮ್ಯಾ (Ramya) ಜೊತೆ ಸಿನಿಮಾವೊಂದನ್ನು ನಿರ್ಮಾಣ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ (Sharmila Mandre). ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ (Award) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶರ್ಮಿಳಾ, ‘ರಮ್ಯಾ ಅವರ ಜೊತೆ ನಾನೊಂದು ಸಿನಿಮಾ ನಿರ್ಮಾಣ (Producer) ಮಾಡಬೇಕು. ಇಬ್ಬರೂ ಒಟ್ಟಾಗಿ ವೇದಿಕೆಯ ಮೇಲೆ ಬಂದು ಅತ್ಯುತ್ತಮ ನಿರ್ಮಾಪಕಿ ಪ್ರಶಸ್ತಿಯನ್ನು ತಗೆದುಕೊಳ್ಳಬೇಕು’ ಎಂದರು.

ನಿರ್ಮಾಪಕಿಯಾಗಿ ಈಗಾಗಲೇ ರಮ್ಯಾ ಸಿನಿಮಾ ರಂಗ ಪ್ರವೇಶ ಮಾಡಿಯಾಗಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ರಮ್ಯಾ ಅವರೇ ಬಂಡವಾಳ ಹೂಡಿದ್ದಾರೆ. ಶರ್ಮಿಳಾ ಮಾಂಡ್ರೆ ಈಗಾಗಲೇ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ದಸರಾ ಸಿನಿಮಾಗೆ ಇವರೇ ಹಣ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ರಮ್ಯಾ ಮತ್ತು ಶರ್ಮಿಳಾ ಮಾಂಡ್ರೆ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಇದನ್ನೂ ಓದಿ: ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2023ರ ಅತ್ಯುತ್ತಮ  ನಟಿ ಪ್ರಶಸ್ತಿಯನ್ನು ಶರ್ಮಿಳಾ ‘ಗಾಳಿಪಟ 2’ ಚಿತ್ರಕ್ಕಾಗಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಸ್ವತಃ ರಮ್ಯಾ ಅವರೇ ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಶರ್ಮಿಳಾ ಬಗ್ಗೆ ವೇದಿಕೆಯ ಮೇಲೆಯೇ ರಮ್ಯಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ತಮ್ಮ ಸ್ನೇಹಿದ ಬಗ್ಗೆ ನೆನಪಿಸಿಕೊಂಡರು. ಪ್ರಶಸ್ತಿ ಪಡೆದದ್ದಕ್ಕಾಗಿ ಅಭಿನಂದಿಸಿದರು.

Comments

Leave a Reply

Your email address will not be published. Required fields are marked *