ನಟಿ ಶಹನಾ ಆತ್ಮಹತ್ಯೆ : ಡೈರಿಯಲ್ಲಿ ಬರೆದಿದ್ದಾಳೆ ಬೆಚ್ಚಿಬೀಳಿಸುವ ಸಂಗತಿ

ಟಿ ಮತ್ತು ರೂಪದರ್ಶಿ ಕೇರಳದ ಶಹನಾ ಮೇ 12 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಟಿಯ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೊಡ್ ನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಶಹನಾ ಸಾವಿನ ಕುರಿತು ತನಿಖೆ ನಡೆಸಿರುವ ಕೇರಳದ ಪೊಲೀಸರು ಒಂದಷ್ಟು ಮಾಹಿತಿಯನ್ನು ಹೊರ ಹಾಕಿದ್ದಾರೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

ನಟಿ ಶಹನಾ ಸಾವಿಗೆ ಅವರ ಪತಿಯೇ ಕಾರಣವೆಂದು ಶಹನಾ ಕುಟುಂಬ ಆರೋಪಿಸಿತ್ತು. ಹೀಗಾಗಿ ಪೊಲೀಸ್ ರು ತನಿಖೆಯನ್ನು ಚುರುಕುಗೊಳಿಸಿದ್ದರು. ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿರುವ ಅಧಿಕಾರಿಗಳು, ಆಕೆ ಬರೆದಿರುವ ಡೈರಿಯನ್ನು ಪತ್ತೆ ಮಾಡಿದ್ದಾರೆ. ಈ ಡೈರಿಯಲ್ಲಿ ಶಹನಾ ತನ್ನ ಗಂಡನ ಕರಾಳ ಮುಖಗಳನ್ನು ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

ಶಹನಾ ಅವರಿಗೆ ತಮ್ಮ ಗಂಡನ ಕಡೆಯ ಕುಟುಂಬ ಸಿಕ್ಕಾಪಟ್ಟೆ ಹಿಂಸೆ ನೀಡಿದೆಯಂತೆ. ಊಟ ಕೊಡದೇ ಸತಾಯಿಸಿದೆಯಂತೆ. ಎರಡು ದಿನಕ್ಕೊಮ್ಮೆ ಒಂದು ತುಂಡು ಬ್ರೆಡ್ ಕೊಡುತ್ತಿದ್ದರು ಎಂದು ಡೈರಿಯಲ್ಲಿ ಬರೆದಿದ್ದಾರೆ ಎನ್ನುತ್ತಿವೆ ಮೂಲಗಳು. ನನ್ನ ಪತಿಯ ಕುಟುಂಬಕ್ಕೆ ಸೊಸೆ ಬೇಕಿರಲಿಲ್ಲ, ಒಬ್ಬ ಸೇವಕಿ ಬೇಕಿತ್ತು ಎಂದು ಶಹನಾ ಬರೆದಿದ್ದಾರಂತೆ.

ಮಾನಸಿಕ ಕಿರುಕುಳ ಮಾತ್ರವಲ್ಲ, ದೈಹಿಕ ಹಿಂಸೆಯನ್ನೂ ಮಾಡಿದ್ದಾರೆ ಎಂದು ಡೈರಿಯಲ್ಲಿ ಬರೆದಿದ್ದಾರಂತೆ ಶಹನಾ. ಗಂಡನ ಅತೃಪ್ತ ಜೀವನದಿಂದ ತಾವು ಖಿನ್ನತೆಗೆ ಒಳಗಾಗಬೇಕಾಯಿತು ಎಂದು ಡೈರಿಯಲ್ಲಿ ಉಲ್ಲೇಖಿಸಿದ್ದಾರಂತೆ.

Comments

Leave a Reply

Your email address will not be published. Required fields are marked *