60 ವರ್ಷದ ಹಳೆಯ ಸೀರೆಯಲ್ಲಿ ಲೆಹೆಂಗಾ ಹೊಲಿಸಿದ ಸಾರಾ ಅಲಿ ಖಾನ್

ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಸಿನಿಮಾ ಜೊತೆಗೆ ಫ್ಯಾಷನ್‌ ಕಡೆಗೂ ಹೆಚ್ಚು ಗಮನ ನೀಡುತ್ತಾರೆ. ಸದ್ಯ 60 ವರ್ಷದ ಹಳೆಯ ಸೀರೆಗಳನ್ನು ಒಟ್ಟು ಮಾಡಿ ಹೊಲಿಸಿದ ಲೆಹೆಂಗಾದಲ್ಲಿ ನಟಿ ಕಂಗೊಳಿಸಿದ್ದಾರೆ. ಸಾರಾ ಧರಿಸಿದ ಲೆಹೆಂಗಾ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ವಿಕಾಸ್ ಸೇಥಿಗೆ ಹೃದಯ ಸ್ತಂಭನ- 48ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ನಟ

ತಾಯಿ ಅಮೃತಾ ಸಿಂಗ್ ಅವರ 50ರಿಂದ 60 ವರ್ಷದ ಹಳೆಯ ಸೀರೆಯನ್ನು ಕಲೆಕ್ಷನ್‌ಗಳನ್ನ ಒಟ್ಟು ಸೇರಿಸಿ ಕಸ್ಟ್ಮೈಸ್ಡ್ ಲಹೆಂಗಾವನ್ನು ಸಾರಾ ಡಿಸೈನ್ ಮಾಡಿಸಿದ್ದಾರೆ. ಇದನ್ನು ಅಂಬಾನಿ ಮನೆಯ ಗಣೇಶ ಹಬ್ಬದಲ್ಲಿ ನಟ ಧರಿಸಿ ಕಂಗೊಳಿಸಿದ್ದಾರೆ. ಹಳೆಯ ಸೀರೆಗೆ ಡಿಸೈನರ್ ಮಯೂರ್ ಗಿರೊತ್ರಾ ಅವರು ಹೊಸ ರೂಪ ನೀಡಿ ಸೈ ಎನಿಸಿಕೊಂಡಿದ್ದಾರೆ.

ಈ ಹಲವು ಬಣ್ಣಗಳಿಂದ ಮಿಶ್ರಿತವಾಗಿರುವ ಈ ಲೆಹಂಗಾದಲ್ಲಿ ಸಾರಾಗೆ ಸಾಂಪ್ರದಾಯಿಕ ಲುಕ್ ನೀಡುತ್ತಿದ್ದು, ತುಂಬಾ ಸೊಗಸಾಗಿ ಕಾಣಿಸುತ್ತಿದ್ದಾರೆ. ನೆರಳೆ ಹಾಗೂ ಗೋಲ್ಡನ್ ಮಿಶ್ರಿತವಾದ ಬ್ಲೌಸ್ ಅನ್ನು ಸಾರಾ ಧರಿಸಿದ್ದು, ಲೈಟ್ ಬಣ್ಣದ ಸಿಲ್ಕ್ ದುಪ್ಪಟ್ಟ ಧರಿಸಿದ್ದಾರೆ.

ಅಂದಹಾಗೆ, ಮೆಟ್ರೋ ಇನ್ ಡಿನೋ,  ಫೋರ್ಸ್ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.