ಉದ್ಯಮಿ ಜೊತೆ ಸಾರಾ ಅಲಿ ಖಾನ್ ಮದುವೆ?

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಸಿನಿಮಾಗಿಂತ ಹೆಚ್ಚಾಗಿ ಖಾಸಗಿ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಜೊತೆ ಸಾರಾ ಡೇಟಿಂಗ್ ನ್ಯೂಸ್ ಕೇಳಿ ಬಂದಿತ್ತು. ಈಗ ಸಾರಾ ಮದುವೆ ಮ್ಯಾಟರ್ ಚಾಲ್ತಿಗೆ ಬಂದಿದೆ. ಉದ್ಯಮಿ (Businessman) ಜೊತೆ ಸಾರಾ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಬಿಟೌನ್‌ನಲ್ಲಿ ಸಾರಾ ಬಗ್ಗೆ ಮದುವೆ ಸುದ್ದಿ ಗುಲ್ಲೆದ್ದಿದೆ. ಉದ್ಯಮಿಯೊಬ್ಬರ ಜೊತೆ ಈಗಾಗಲೇ ಸಾರಾ ಎಂಗೇಜ್‌ಮೆಂಟ್ (Engagement)  ಮಾಡಿಕೊಂಡಿದ್ದಾರೆ. ನಟಿ ಮದುವೆಗೆ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಮದುವೆ (Wedding) ಆಗಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ನಟಿಯ ಕುಟುಂಬದಿಂದ ಈ ಬಗ್ಗೆ ಯಾವುದೇ ಸ್ಟಷ್ಟನೆ ಸಿಕ್ಕಿಲ್ಲ. ಇದನ್ನೂ ಓದಿ:ಸಣ್ಣ ವಯಸ್ಸಿನಲ್ಲಿಯೇ ನನ್ನ ಫೋಟೋ ಅಶ್ಲೀಲ ವೆಬ್‌ಸೈಟ್‌ಗೆ ಹಾಕಿದ್ರು ಎಂದ ಜಾನ್ವಿ ಕಪೂರ್

ಸಾರಾ ಹೆಸರು ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಆದಿತ್ಯಾ, ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೇಳಿ ಬಂದಿತ್ತು. ಈಗ ಉದ್ಯಮಿ ಜೊತೆಗಿನ ಸಾರಾ ಮದುವೆ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. ಈಗ ಆದ್ರೂ ಮದುವೆ ಸುದ್ದಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡ್ತಾರಾ? ಕಾದುನೋಡಬೇಕಿದೆ. ಇದನ್ನೂ ಓದಿ:ರಾಜಮೌಳಿ, ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್

ಸೆಲೆಬ್ರಿಟಿ ಕಿಡ್ ಸಾರಾ ಸದ್ಯ ‘ಮೆಟ್ರೋ’ (Metro Film) ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಕಥೆಗಳನ್ನು ಕೇಳ್ತಿದ್ದಾರೆ.