EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

ಮೀಟೂ ಆರೋಪದ ನಂತರ ದೇಶವನ್ನೇ ತೊರೆದಿದ್ದ ನಟ ಸಂಗೀತಾ ಭಟ್ ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ವಾಪಸ್ಸಾಗಿದ್ದಾರೆ. ಸದ್ಯ ಅವರು ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಸಿನಿಮಾದ ಚಿತ್ರೀಕರಣ ಕುಕ್ಕೆಯ ಸುತ್ತಮುತ್ತ ನಡೆದಿದೆ. ಇದನ್ನೂ ಓದಿ : ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

2018ರಲ್ಲಿ ಮೀಟೂ ಆರೋಪ ಮಾಡಿದ್ದ ಸಂಗೀತಾ, ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ವಿಡಿಯೋವೊಂದನ್ನು ಮಾಡಿದ್ದರು. ಅದರಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಅವರ ವಿಡಿಯೋ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿತ್ತು. ಮೀಟೂ ಅಭಿಯಾನಕ್ಕೆ ಮತ್ತಷ್ಟು ಬಲ ತಂದಿತ್ತು. ಮೀಟೂ ಆರೋಪದ ನಂತರ ಅವರ ಮೇಲೆ ಸಲ್ಲದ ಆರೋಪಗಳನ್ನೂ ಕೆಲವರು ಮಾಡಿದರು. ಇದರಿಂದಾಗಿ ಬೇಸತ್ತಿದ್ದ ಸಂಗೀತಾ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೊರಟು ನಿಂತರು. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

ಮೀಟೂ ಆರೋಪದ ನಂತರ ಅವರು ಎಲ್ಲಿದ್ದರು? ಏನು ಮಾಡುತ್ತಿದ್ದಾರೆ ಎನ್ನುವ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ ಸಂಗೀತಾ. ವರ್ಷದ ನಂತರ ಪತಿಯೊಂದಿಗೆ ಜರ್ಮನ್ ನಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು

ಸಂಗೀತಾ ನಟನೆಯ ‘ಕಪಟ ನಾಟಕ ಪಾತ್ರಧಾರಿ’ ಸಿನಿಮಾ ರಿಲೀಸ್ ಆಗುವ ಹೊತ್ತಿನಲ್ಲಿ ಸಂಗೀತಾ ಭಟ್ ಪ್ರಚಾರಕ್ಕಾಗಿ ಬರುತ್ತಾರೆ ಎನ್ನಲಾಗಿತ್ತು. ಆದರೆ, ಆ ವೇಳೆಯಲ್ಲೂ ಅವರು ಬರಲಿಲ್ಲ. ವಿದೇಶದಲ್ಲಿಯೇ ಕೂತುಕೊಂಡು ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

ಸಂಗೀತಾ ಪ್ರತಿಭಾನ್ವಿತ ನಟಿ. ಪವನ್ ಒಡೆಯರ್ ನಟನೆಯ ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಪರಿಚಯವಾದ ಇವರು, ಫೇಮಸ್ ಆಗಿದ್ದು ಡಾಲಿ ಧನಂಜಯ್ ನಟನೆಯ ‘ಎರಡನೇ ಸಲ’ ಚಿತ್ರದ ಮೂಲಕ. ಈವರೆಗೂ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಮತ್ತೆ ಸಿನಿಮಾ ರಂಗಕ್ಕೆ ಬಂದಿದ್ದು, ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

Comments

Leave a Reply

Your email address will not be published. Required fields are marked *