ನಿರ್ದೇಶಕ ರಾಜ್ ನಿಧಿಮೋರು (Raj Nidhimoru) ಹಾಗೂ ಸೌತ್ ಬ್ಯೂಟಿ ಸಮಂತಾ (Actress Samantha) ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ದೇವಸ್ಥಾನಗಳಿಗೆ ಒಟ್ಟೊಟ್ಟಿಗೆ ಭೇಟಿ ಮಾಡಿರುವ ಫೋಟೋಗಳು, ವಿಡಿಯೋಗಳು ವೈರಲ್ ಆಗಿದ್ದವು. ಅಲ್ಲದೇ ಹುಟ್ಟುಹಬ್ಬದ ಆಚರಣೆ ಮಾಡಿದ ಫೋಟೋಗಳು ಸಾಕಷ್ಟು ಕಥೆಗಳನ್ನ ಹೇಳುತ್ತಿದ್ದವು. ಇದೀಗ ಮತ್ತಷ್ಟು ಪುಷ್ಠಿ ನೀಡುವಂತೆ ರಾಜ್ ನಿಧಿಮೋರು ಕುಟುಂಬದ ಜೊತೆ ಸ್ಯಾಮ್ ಪ್ರತ್ಯಕ್ಷರಾಗಿದ್ದಾರೆ.
ಸಮಂತಾ ತಮ್ಮ ಬಾಯ್‌ಫ್ರೆಂಡ್ ರಾಜ್ ನಿಧಿಮೋರು ಕುಟುಂಬದ ಜೊತೆ ದೀಪದ ಹಬ್ಬ ಆಚರಿಸಿದ್ದಾರೆ. ಈ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಹಂಚಿಕೊಂಡಿದ್ದಾರೆ. ಕೆಲ ದಿನಗಳಿಂದ ರಾಜ್ ಜೊತೆ ಸಮಂತಾ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗ್ತಿದೆ. ಮೊನ್ನೆಯಷ್ಟೇ ಅನಾಥಾಶ್ರಮದ ಮಕ್ಕಳ ಜೊತೆ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದ ಸಮಂತಾ ರಾಜ್ ನಿಧಿಮೋರು ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ್ದಾರೆ.ಇದನ್ನೂ ಓದಿ: BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ
View this post on Instagram
ರಾಜ್ ನಿಧಿಮೋರು ಹಾಗೂ ಸಮಂತಾ ಸದ್ಯದಲ್ಲಿಯೇ ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರುತ್ತಿವೆ. ಅದರಲ್ಲೂ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿ ಆಗಾಗ ಕೇಳಿ ಬರುತ್ತಿದ್ದವು. ಇದೀಗ ಈ ಫೋಟೋ ನೋಡಿದ್ಮೇಲೆ ಆ ಸುದ್ದಿಗಳಿಗೆ ರೆಕ್ಕೆ ಪುಕ್ಕಗಳು ಬಂದಂತಾಗಿವೆ.
