ಟಾಲಿವುಡ್ (Tollywood) ಬ್ಯೂಟಿ ಸಾಯಿ ಪಲ್ಲವಿ (Sai Pallavi) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್ (Allu Arjun) ಜೊತೆಗೆ ತೆರೆಹಂಚಿಕೊಳ್ಳಲು ಸಾಯಿ ಪಲ್ಲವಿ ಸಜ್ಜಾಗಿದ್ದಾರೆ. ಇದನ್ನೂ ಓದಿ: ಖುಷಿ ದಾಂಪತ್ಯದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್

ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ `ಪುಷ್ಪ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. `Pushpa 2′ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರತಂಡಕ್ಕೆ ಸಾಯಿ ಪಲ್ಲವಿ ಸಾಥ್ ನೀಡ್ತಿದ್ದಾರೆ.

ಶೀಘ್ರದಲ್ಲಿಯೇ ಸಾಯಿ ಪಲ್ಲವಿ ಸೆಟ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಬಹುಮುಖ್ಯ ಪಾತ್ರವನ್ನೇ ನಟಿ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಯಿ ಪಲ್ಲವಿ `ಪುಷ್ಪ 2′ ಟೀಂ ಜೊತೆ ಸಾಥ್ ನೀಡಿರೋದು ಅದೆಷ್ಟರ ಮಟ್ಟಿಗೆ ನಿಜಾನಾ ಎಂಬುದನ್ನ ತಿಳಿಯಲು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

Leave a Reply