MeeToo : ಆ ಅಸಹ್ಯ ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ರತನ್ ರಾಜಪೂತ್

ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ರತನ್ ರಾಜಪೂತ್ (Ratan Rajput) ತಮಗಾದ ಕಾಸ್ಟಿಂಗ್ ಕಾಚ್ (Casting Couch) ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಒಂದು ವೇಳೆ ನಾನು ಅವನು ಹೇಳಿದಂತೆ ಕೇಳಿದ್ದರೆ, ಸ್ಟಾರ್ ನಟಿಯಾಗಿರುತ್ತಿದ್ದೆ. ಆದರೆ, ಅದು ನನಗಿಷ್ಟವಾಗದ ದಾರಿ. ಹಾಗಾಗಿ ಅವನ ಮುಖಕ್ಕೆ ಉಗಿದು ಬಂದೆ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.

ಆ ನಿರ್ದೇಶಕನಿಗೆ ಅರವತ್ತರ ವಯಸ್ಸು. ನನ್ನನ್ನು ನಾಯಕಿಯನ್ನಾಗಿ ಮಾಡುತ್ತೇನೆ ಅಂದ. ನನಗೆ ಗಾಡ್ ಫಾದರ್ ಆಗುತ್ತೇನೆ ಅಂತಾನೂ ಹೇಳಿದ. ನನ್ನ ಚರ್ಮ, ಮುಖ ಸರಿ ಇಲ್ಲ. ತಲೆಗೂದಲು ಚೆನ್ನಾಗಿಲ್ಲ ಹೀಗೆ ಅನೇಕ ಸಂಗತಿಗಳನ್ನು ಪಟ್ಟಿಮಾಡಿ, ಇದೆಲ್ಲವನ್ನೂ ಸರಿ ಮಾಡಿ ನಿನ್ನನ್ನು ಹೀರೋಯಿನ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಅಂದರೆ ಒಂದಷ್ಟು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಿನಗಾಗಿ ನಾನು ಆ ಖರ್ಚು ಮಾಡಬೇಕು ಅಂದರೆ, ನೀನು ನನ್ನವಳಾಗಬೇಕು ಎಂದಿದ್ದರಂತೆ ನಿರ್ದೇಶಕರು. ಇದನ್ನೂ ಓದಿ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಆಸ್ಪತ್ರೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದೆ ಆತಂಕ

ಆ ವ್ಯಕ್ತಿಯು ನನ್ನೊಂದಿಗೆ ಫ್ರೆಂಡ್ ರೀತಿ ಇರಬೇಕು, ನಾನು ಕೇಳಿದ್ದನ್ನು ಕೊಡಬೇಕು ಅಂದಾಗ ನನಗೆ ಅರಿವಾಯಿತು. ನೀವು ನನ್ನ ತಂದೆ ಸಮಾನರು, ಗುರು ಕೂಡ. ದೊಡ್ಡವರಾಗಿ ಹೀಗೆ ಮಾತನಾಡಬಾರದು. ನಿಮ್ಮನ್ನು ನಾನು ಗೌರವದಿಂದ ಕಾಣುತ್ತಿದ್ದೇನೆ ಅಂದೆ. ನನ್ನ ಮಗಳು ನಟಿಯಾಗಿದ್ದರೂ, ನಾನು ಅವಳ ಜೊತೆ ಮಲಗುತ್ತಿದ್ದೆ ಎಂದು ಅಸಹ್ಯವಾಗಿ ಹೇಳಿದ. ಅಂತಹ ಅಸಹ್ಯ ವ್ಯಕ್ತಿಯಿಂದ ದೂರ ಬಂದು ಬಿಟ್ಟೆ. ಹೀಗೆ ಬಾಲಿವುಡ್ ನಲ್ಲಿ ಅನೇಕರಿಗೆ ಇಂತಹ ಅನುಭವ ಆಗಿರುತ್ತದೆ ಎಂದಿದ್ದಾರೆ ರತನ್.

ರತನ್ ಬಿಹಾರ(Bihar) ಮೂಲದವರು. ಹಿಂದಿ ಕಿರುತೆರೆಯಲ್ಲಿ ಫೇಮಸ್ ಹೆಸರು. ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 9 ಹಿಂದಿಯಲ್ಲಿ ಭಾಗಿಯಾಗಿದ್ದರು. ಅಲ್ಲದೇ, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ವೊಂದನ್ನು ಅವರು ನಡೆಸುತ್ತಿದ್ದು, ಮುಂಬೈಗೆ ಬಂದಾಗಿನ ಕೆಲ ಸಂಗತಿಗಳನ್ನು ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *