ಎಲ್ಲ ಮುಗ್ಧ ಹುಡುಗರಿಗೆ “What The F” ನೋಡಲು ರಶ್ಮಿಕಾ ಸಲಹೆ!

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಮುಗ್ಧ ಹುಡುಗರಿಗೆ ‘ವಾಟ್ ದಿ ಎಫ್’ ಹಾಡು ನೋಡಲು ಸಲಹೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ತೆಲುಗಿನ ‘ಗೀತಾ ಗೋವಿದಂ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದ್ದು, ರಶ್ಮಿಕಾ ಈ ಹಾಡನ್ನು ನೋಡಿ ಎಂದು ತಮ್ಮ ಟ್ಟಿಟ್ಟರಿನಲ್ಲಿ ವಿಡಿಯೋ ಹಾಕುವ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋ ಹಾಕಿ “ವಾಟ್ ದಿ ಎಫ್ ಹಾಡು ಬಿಡುಗಡೆಯಾಗಿದೆ. ನಾನು ಈ ಹಾಡಿನ ಪ್ರಚಾರ ಮಾಡಬೇಕು. ಏಕೆಂದರೆ ಇದು ನನ್ನ ಚಿತ್ರ. ನಾನು ಮತ್ತೇನು ಮಾಡಲು ಆಗುವುದಿಲ್ಲ. ಎಲ್ಲ ಮುಗ್ಧ ಹುಡುಗರೇ ಈ ಹಾಡನ್ನು ನೋಡಿ ಹಾಗೂ ಎಲ್ಲ ಮಹಿಳೆಯರೇ ನಾವು ಈ ರೀತಿಯ ಹಾಡನ್ನು ಬರೆಯಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ವಾಟ್ ದಿ ಎಫ್ ಹಾಡನ್ನು ಬಾಲಿವುಡ್ ಗಾಯಕರಾದ ಅರ್ಜಿತ್ ಸಿಂಗ್ ಹಾಗೂ ಸೋನಂ ನಿಗಮ್ ಹಾಡಬೇಕಿತ್ತು. ಆದರೆ ಅವರು ಸಿಗಲಿಲ್ಲ ಎಂಬ ಕಾರಣಕ್ಕೆ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಹಾಡನ್ನು ನೀನು ಹಾಡು ಎಂದು ಹೇಳಿದ್ದರು. ಹಾಗಾಗಿ ನಾನು ಈ ಹಾಡು ಹಾಡುತ್ತಿದ್ದೇನೆ ಎಂದು ನಟ ವಿಜಯ್ ದೇವರಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ.

ಗೀತಾ ಗೋವಿದಂ ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ಮೊದಲನೇ ಹಾಡು ಯೂಟ್ಯೂಬ್‍ನಲ್ಲಿ ಸಾಕಷ್ಟು ಹಿಟ್ ಆಗಿದ್ದು, ಹಾಡು ಇದುವರೆಗೂ 23.45 ಲಕ್ಷ ವ್ಯೂ ಪಡೆದಿದೆ.

ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿತ್ತು. ಈಗ ಈ ಟೀಸರ್ 55 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ಕನ್ನಡದ ವರನಟ ರಾಜ್‍ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ ಹಾಡಿನ ತೆಲುಗು ಟ್ಯೂನ್‍ನೊಂದಿಗೆ ಟೀಸರ್ ಆರಂಭವಾಗಿದೆ.

ಸದ್ಯ ಈ ಚಿತ್ರವನ್ನು ಪರುಶರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸದ್ಯ ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

https://www.youtube.com/watch?v=T4imX7yFgY0

Comments

Leave a Reply

Your email address will not be published. Required fields are marked *