2 ಪದಗಳಲ್ಲಿ ಸುದೀಪ್ ಬಗ್ಗೆ ಹೇಳಿ ಎಂದ ಅಭಿಮಾನಿ – ರಶ್ಮಿಕಾ ಮಾತು ಕೇಳಿ ಕಿಚ್ಚ ಹ್ಯಾಪಿ

ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳು ತನ್ನ ನೆಚ್ಚಿನ ನಟನ ಬಗ್ಗೆ ಎರಡು ಪದಗಳಲ್ಲಿ ಹೇಳಿ ಎಂದು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಟ್ವೀಟ್ ಮಾಡಿದ್ದರು. ಅಭಿಮಾನಿಗಳ ಆಸೆಯಂತೆ ರಶ್ಮಿಕಾ ಅವರು ಎರಡು ಪದಗಳಲ್ಲಿ ಸುದೀಪ್ ಬಗ್ಗೆ ಹೇಳಿದ್ದಾರೆ. ಇದಕ್ಕೆ ಸುದೀಪ್ ಕೂಡ ಖುಷಿಪಟ್ಟು ಧನ್ಯವಾದ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಫ್ಯಾನ್ಸ್ ಟ್ವಿಟ್ಟರ್ ಮೂಲಕ ಅಭಿಮಾನಿಯೊಬ್ಬರು ‘ನಮ್ಮ ಕಿಚ್ಚ ಸುದೀಪ್ ಬಗ್ಗೆ ಎರಡೇ ಎರಡು ಮಾತುಗಳಲ್ಲಿ ಹೇಳಿ” ಎಂದು ರಶ್ಮಿಕಾ ಮಂದಣ್ಣ ಅವರಿಗೆ ಟ್ವೀಟ್ ಮಾಡಿದ್ದರು. ಇದಕ್ಕೆ ನಟಿ ರಶ್ಮಿಕಾ ತಕ್ಷಣವೇ “ಅವರು ತುಂಬಾ ಕಾಳಜಿಯುಳ್ಳ ಹಾಗೂ ಪ್ರಾಮಾಣಿಕ ವ್ಯಕ್ತಿ” ಎಂದು ಅಭಿಮಾನಿಗಳಿಗೆ ಉತ್ತರ ನೀಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಉತ್ತರಕ್ಕೆ ಅಭಿಮಾನಿ ಮಾತ್ರವಲ್ಲದೇ ಸುದೀಪ್ ಕೂಡ “ನಗುವ ಎಮೋಜಿ ಹಾಕಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ರಶ್ಮಿಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಹೆಬ್ಬುಲಿ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಇನ್ನೂ ನಟಿ ರಶ್ಮಿಕಾ ಮಂದಣ್ಣ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾದಲ್ಲಿ ನಟಿಸಿದ್ದು, ಸದ್ಯಕ್ಕೆ ಅವರು ನಟ ವಿಜಯ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೆಡ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *