ಡೈಲಾಗ್ ಟ್ರೋಲ್‌ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿದ ಬಹುನಿರೀಕ್ಷಿತ ‘ಪೊಗರು’ ಚಿತ್ರದ ಡೈಲಾಗ್ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಧ್ರುವ, ನಟಿ ರಶ್ಮಿಕಾ ಮಂದಣ್ಣಗೆ ಹೇಳಿದ ಖಡಕ್ ಡೈಲಾಗ್ ವೈರಲ್ ಆಗಿದೆ. ಈ ಡೈಲಾಗ್ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ರಶ್ಮಿಕಾ ತಿರುಗೇಟು ನೀಡಿದ್ದಾರೆ.

ಟ್ರೈಲರ್ ನಲ್ಲಿ ರಶ್ಮಿಕಾ ನಟ ಧ್ರುವನಿಗೆ ಇಂಗ್ಲಿಷ್ ಭಾಷೆಯಲ್ಲಿ ನಿಂದಿಸುತ್ತಾರೆ. ಈ ವೇಳೆ ಧ್ರುವ “ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು” ಎಂದು ಡೈಲಾಗ್ ಹೇಳಿದ್ದಾರೆ. ಈ ಡೈಲಾಗ್ ರಶ್ಮಿಕಾ ಅವರಿಗಾಗಿಯೇ ಬರೆದ ಹಾಗೆ ಇದೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಇದರಿಂದ ರೊಚ್ಚಿಗೆದ್ದ ರಶ್ಮಿಕಾ, “ಈ ಡೈಲಾಗ್ ಅನ್ನು ಯಾಕೆ ಇಟ್ಟಿದ್ದೇವೆ ಎಂದು ನಾವು ಈಗ ಚರ್ಚೆ ಮಾಡುತ್ತಿದ್ದೇವೆ. ತುಂಬಾ ಜನರು ರಶ್ಮಿಕಾ ಮಂದಣ್ಣ (ಒಳ್ಳೆಯ ಅಥವಾ ಕೆಟ್ಟದರ) ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ರಶ್ಮಿಕಾ ಗೆದ್ದಳು ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು” ಎಂದು ವ್ಯಕ್ತಿಯೊಬ್ಬನ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದರು.

ಪೊಗರು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು, ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ಮಿಸಿದ್ದು, ಬಿ.ಕೆ ಗಂಗಾಧರ್ ನಿರ್ಮಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *