ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

‘ಪುಷ್ಪ’ (Pushpa) ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ‘ಅನಿಮಲ್’ (Animal)  ಚಿತ್ರದ ಸಕ್ಸಸ್‌ನಿಂದ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ. ಈ ಚಿತ್ರದ ಸಕ್ಸಸ್ ನಂತರ ಅನಿಮಲ್ ತಂಡದ ಜೊತೆ ರಶ್ಮಿಕಾ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಚಿತ್ರತಂಡದಿಂದ ನಟಿ ಅಂತರ ಕಾಯ್ದುಕೊಂಡಿದ್ದಾರೆ ಎಂದೆಲ್ಲಾ ನೆಗೆಟಿವ್‌ ಸುದ್ದಿ ಹಬ್ಬಿತ್ತು. ಇದಕ್ಕೆಲ್ಲಾ ಸ್ವತಃ ನಟಿ ರಶ್ಮಿಕಾ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಸಕ್ಸಸ್ ಯಶಸ್ಸನ್ನು ಸಂಭ್ರಮಿಸುತ್ತಿಲ್ಲ ಮಾತುಗಳು ಕೇಳಿ ಬಂದ ಬೆನ್ನಲ್ಲೇ ರಶ್ಮಿಕಾ ಪ್ರತಿಕ್ರಿಯಿಸಿ, ಪ್ರೀತಿ, ಕಾಳಜಿ ಇರುವವರೇ ಹೀಗೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ತಿಳಿದಿದೆ. ನಾವು ಹಿಟ್ ಸಿನಿಮಾವನ್ನು ನೀಡಿದ್ದೇವೆ. ನಮ್ಮ ಚಿತ್ರವನ್ನು ಜನ ಎಂಜಾಯ್ ಮಾಡಿದ್ದಾರೆ. ಚಿತ್ರದ ಸಕ್ಸಸ್ ಎಂಜಾಯ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕೆಂದು ಬಯಸಿದ್ದೆ. ಆದರೆ ನನ್ನ ಚಿತ್ರ ಬಿಡುಗಡೆಯ ಮರುದಿನವೇ ನಾನು ಇನ್ನೊಂದು ಸಿನಿಮಾದ ಶೂಟಿಂಗ್ ಸೆಟ್‌ಗೆ ಹೋಗಬೇಕಾಯ್ತು ಎಂದಿದ್ದಾರೆ.

ಚಿತ್ರದ ಪ್ರಚಾರ ಕಾರ್ಯದಲ್ಲಿ ಮತ್ತು ಸಕ್ಸಸ್ ಸಂಭ್ರಮದಲ್ಲಿ ಹಾಜರಿ ಹಾಕಲು ಸಾಧ್ಯವಾಗಲಿಲ್ಲ. ನಾನು ಕೆಲಸಕ್ಕಾಗಿ ಈ ರಾತ್ರಿಯ ಪ್ರಯಾಣಗಳನ್ನು ಮಾಡಲೇಬೇಕಾಗಿದೆ. ಬೇರೇ ಬೇರೇ ಸಿನಿಮಾಗಳಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದೇನೆ. ಅಲ್ಲದೆ ನನ್ನ ಸಿನಿಮಾಗಳ ಲುಕ್‌ಗಳನ್ನು ನಾನು ರಿವೀಲ್ ಮಾಡಲು ಆಗುವುದಿಲ್ಲ. ನಾನು ಸಂದರ್ಶನಗಳಲ್ಲಿ ಭಾಗಿ ಆಗದೇ ಇರುವುದಕ್ಕೆ ಇದು ಕೂಡ ಮುಖ್ಯ ಕಾರಣ ರಶ್ಮಿಕಾ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ಉಮಾಪತಿಗೆ ಠಕ್ಕರ್ ಕೊಡಲು ಮುಂದಾದ ಡಿಬಾಸ್ ಫ್ಯಾನ್ಸ್

ಮುಂದೆ ಈ ರೀತಿಯ ಸಮಸ್ಯೆ ಬರದೇ ಇರುವ ಹಾಗೇ ನನ್ನ ತಂಡದ ಜೊತೆ ಸೇರಿ ಯೋಜನೆ ರೂಪಿಸುತ್ತೇನೆ ಎಂದಿದ್ದಾರೆ. ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಇಲ್ಲದ ಮಾತ್ರಕ್ಕೆ ಸಕ್ಸಸ್ ಖುಷಿಯನ್ನು ಅನುಭವಿಸುತ್ತಿಲ್ಲ ಎಂದರ್ಥವಲ್ಲ. ನಮಗಿಂತಲೂ ನಮ್ಮ ಕೆಲಸ ಹೆಚ್ಚು ಮಾತನಾಡಬೇಕು ಎಂಬುದು ನನ್ನ ನಂಬಿಕೆ. ಅಭಿಮಾನಿಗಳ ಸಂದೇಶಗಳು ನನಗೆ ತಲುಪುತ್ತಿದೆ. ಫ್ಯಾನ್ಸ್‌ ಪ್ರೀತಿ ನೋಡಿ ನಾನು ಖುಷಿ ಪಡುತ್ತಿದ್ದೇನೆ ಎಂದಿದ್ದಾರೆ.

ಅಂದಹಾಗೆ ತಮ್ಮ ಪೋಸ್ಟ್‌ನಲ್ಲಿ ‘ಅನಿಮಲ್’ ಸಿನಿಮಾದ ಹೆಸರನ್ನು ಕಲಾವಿದರ ಹೆಸರನ್ನು ಸಹ ರಶ್ಮಿಕಾ ತೆಗೆದುಕೊಂಡಿಲ್ಲ ಎಂಬುದು ಗಮನಿಸಬೇಕಾದ ಅಂಶ. ಸಿನಿಮಾ ಗೆದ್ದಿರೋದು ನನಗೆ ನಿಜಕ್ಕೂ ಖುಷಿಯಿದೆ. ಆದರೆ ಸಕ್ಸಸ್ ಪಾರ್ಟಿಯಲ್ಲಿ ಯಾಕೆ ಭಾಗಿಯಾಗಿಲ್ಲ ಎಂಬುದರ ಬಗ್ಗೆ ನಟಿ ಉತ್ತರ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆ ನಟಿ ಫುಲ್ ಸ್ಟಾಪ್ ಹಾಕಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರವು ಡಿ.1ರಂದು ರಿಲೀಸ್ ಆಗಿತ್ತು.ರಣ್‌ಬೀರ್‌ಗೆ (Ranbir Kapoor)  ನಾಯಕಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದರು. ಸೆಕೆಂಡ್ ಲೀಡ್ ಆಗಿ ತೃಪ್ತಿ ದಿಮ್ರಿ (Tripti Dimri) ನಟಿಸಿದ್ದರು. ಈಗ ಅನಿಮಲ್ ಪಾರ್ಟ್ 2ಗೆ ತಯಾರಿ ನಡೆಯುತ್ತಿದೆ.